ಅಲಿಗಢ ವಿವಿ ವಿದ್ಯಾರ್ಥಿ ಆಲಮ್‌ಗೀರ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ದೋಷಮುಕ್ತಿ
ಹೊಸದಿಲ್ಲಿ, ಜೂ.17: 2015ರಲ್ಲಿ ಅಲಿಘಡ ಮುಸ್ಲಿಂ ವಿವಿ (ಎಎಂಯು) ಕ್ಯಾಂಪಸ್ನಲ್ಲಿ 23 ವರ್ಷದ ವಿದ್ಯಾರ್ಥಿಯೊಬ್ಬನ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಅಲಿಗಢ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದೆ. ಅಂತಿಮ ವರ್ಷ ಸಮಾಜಸೇವಾ ಪದವಿ (ಬಿಎಸ್ಡಬ್ಲ್ಯು) ವಿದ್ಯಾರ್ಥಿ ಅಲಂಗೀರ್ ಕೊಲೆ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದರು.
ಈ ಪ್ರಕರಣದ ಪ್ರಮುಖ ಸಾಕ್ಷಿಗಳು ತಿರುಗಿಬಿದ್ದುದೇ ಮೊಕದ್ದಮೆಯಲ್ಲಿ ಹಿನ್ನಡೆಯುಂಟಾಗಲು ಕಾರಣ.ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ ಎಂಬ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.
ಶಹರಣ್ಪುರದ ನಿವಾಸಿಯಾದ ಆಲಂಗೀರ್ನನ್ನು ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಎಎಂಯು ಕ್ಯಾಂಪಸ್ ನ ಕಂಪ್ಯೂಟರ್ ಕೇಂದ್ರದ ಒಳಗಡೆ 2015ರ ಸೆಪ್ಟೆಂಬರ್ 18ರಂದು ಗುಂಡಿಕ್ಕಿ ಹತ್ಯೆಗೈದಿದ್ದರು.
ಆಲಂಗೀರ್ ಹತ್ಯೆಗೆ ಸಂಬಂಧಿಸಿ, ಅವರ ಸಹೋದರ ಜಹಾಂಗೀರ್ ಆಲಂ ನೀಡಿದ ದೂರಿನ ಮೇರೆಗೆ ಎಎಂಯುನ ನಾಲ್ವರು ಹಳೆ ವಿದ್ಯಾರ್ಥಿಗಳಾದ ಶಹದಾಬ್, ರೆಹಾನ್ ಹಾಗೂ ಆಶುತೋಷ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆಲಂಗೀರ್ ನ ಕೊಲೆನಡೆದ ಸಂದರ್ಭದಲ್ಲಿ ಮಿಶ್ರಾನನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲಿನಲ್ಲಿರಿಸಲಾಗಿತ್ತು.
ಆಲಂಗೀರ್ ಹಾಗೂ ಮಿಶ್ರಾ ನಡುವೆ ಇದ್ದ ವಿವಾದವೇ ಕೊಲೆಗೆ ಹೇತುವಾಯಿತೆಂದು ಪೊಲೀಸರು ತಿಳಿಸಿದ್ದು. ಈ ಹಿಂದೆಯೂ ಆರೋಪಿಯು ಆಲಂಗೀರ್ ಜೊತೆ ಹಲವಾರು ಬಾರಿ ಜಗಳವಾಡಿದ್ದನೆಂದು ಅವರು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದರು.
ಆಲಂಗೀರ್ ಹತ್ಯೆಯನ್ನು ಖಂಡಿಸಿ ಎಎಂಯವಿನಲ್ಲಿ ಹಲವಾರು ದಿನಗಳ ಕಾಲ ಪ್ರತಿಭಟನೆಗಳು ಮುಂದುವರಿದಿದ್ದರಿಂ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ವ್ಯತ್ಯಯವುಂಟಾಗಿತ್ತು. ಆಗಿನ ಉಪಕುಲಪತಿ ಝಮೀರ್ ಉದ್ದೀನ್ ಶಾ ಅವರು ಆಲಂಗೀರ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ರಾಜ್ಯ ಸರಕಾರವನ್ನು ಕೋರಿದ್ದರು.