ಅಮೃತ ಕಾಲಕ್ಕೆ ಕರ್ತವ್ಯ ಕಾಲ ಎಂದು ಹೆಸರಿಸಲಾಗಿದೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ, ಫೋಟೋ: ANI
ಹೊಸದಿಲ್ಲಿ: ಭಾರತವು ತನ್ನ "ಕರ್ತವ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವುದರಿಂದ ಮುಂದಿನ 25 ವರ್ಷಗಳ ಭಾರತದ ಸ್ವಾತಂತ್ರ್ಯವು "ಕರ್ತವ್ಯ ಕಾಲ" ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
"ಭಾರತವು ತನ್ನ ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸ್ವಾತಂತ್ರ್ಯದ ಮುಂದಿನ 25 ವರ್ಷಗಳು ನಮ್ಮ ಕರ್ತವ್ಯ ಕಾಲವಾಗಲಿವೆ. 100 ವರ್ಷಗಳ ಸ್ವಾತಂತ್ರ್ಯದ ಗುರಿಯತ್ತ ಸಾಗುತ್ತಿರುವ ನಾವು ನಮ್ಮ 'ಅಮೃತ ಕಾಲ'ಕ್ಕೆ 'ಕರ್ತವ್ಯ ಕಾಲ' ಎಂದು ಹೆಸರಿಟ್ಟಿದ್ದೇವೆ’’ ಎಂದರು.
ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಅನ್ನು ಉದ್ಘಾಟಿಸಿದ ನಂತರ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
."ನಾನು ಈ ಸಮಾವೇಶ ಕೇಂದ್ರದ ಚಿತ್ರಗಳನ್ನು ನೋಡಿದ್ದೇನೆ. ಇದು ಆಧ್ಯಾತ್ಮಿಕ ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರವಾಗಿರುತ್ತದೆ. ಪ್ರಪಂಚದಾದ್ಯಂತದ ತಜ್ಞರು ಇಲ್ಲಿಗೆ ಬರುತ್ತಾರೆ ಮತ್ತು ಈ ಕೇಂದ್ರವು ದೇಶದ ಯುವಕರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಕರ್ತವ್ಯಗಳಲ್ಲಿ ಮಾರ್ಗದರ್ಶನವೂ ಇದೆ . ಆಧ್ಯಾತ್ಮಿಕ ಮೌಲ್ಯಗಳು ಮತ್ತು ಭವಿಷ್ಯಕ್ಕಾಗಿ ಸಂಕಲ್ಪಗಳಿವೆ. ಇದರಲ್ಲಿ ಅಭಿವೃದ್ಧಿ ಮತ್ತು ಪರಂಪರೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.