ಮುಡಿಪು: ಜವಾಹರ ನವೋದಯ ವಿದ್ಯಾಲಯ; 6 ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಕೊಣಾಜೆ: ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಎಸ್ ಸಿ ಪಠ್ಯಕ್ರಮ ಆಧಾರಿತ ವಸತಿ ಶಾಲೆಯಾದ ಮುಡಿಪುವಿನ ಜವಾಹರ ನವೋದಯ ವಿದ್ಯಾಲಯದ 2024-25 ನೇ ಸಾಲಿನ ಆರನೇ ತರಗತಿಯ ಪ್ರವೇಶಾತಿಯ ಆಯ್ಕೆ ಪರೀಕ್ಷೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ ಸರಕಾರದಿಂದ ಮಾನ್ಯತೆ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಶಿಕ್ಷ ನೀಡಲಾಗುತ್ತದೆ.
ಅರ್ಹ ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಲ್ಪಟ್ಟ ವ್ಯಾಸಾಂಗ ಪ್ರಮಾಣ ಪತ್ರ ಪಡೆದು ಯಾವುದೇ ಇಂಟರ್ ನೆಟ್ ಕೇಂದ್ರಗಳ/ ಮೊಬೈಲ್/ಲ್ಯಾಪ್ಟಾಪ್ ಮೂಲಕ www.navodaya.gov.in ಅಥವಾ https://cbseitms.nic.in ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದ ವ್ಯಾಸಾಂಗ ಪ್ರಮಾಣಪತ್ರ, ವಿದ್ಯಾರ್ಥಿಯ ಭಾವಚಿತ್ರ, ಸಹಿ ಮತ್ತು ಹೆತ್ತವರ ಸಹಿಯೊಂದಿಗೆ ಆನ್ಲೈನ್ ಕೇಂದ್ರಕ್ಕೆ ಭೇಟಿ ನೀಡತಕ್ಕದ್ದು. ಆಧಾರ್ ನಂಬರ್( ಆಧಾರ್ ನಂಬರ್ ಕಾರ್ಡ್ ವಿಳಾಸವು ದಕ್ಷಿಣಕನ್ನಡ ಜಿಲ್ಲೆಯದ್ದಾಗಿರಬೇಕು) ಮತ್ತು ಅದಕ್ಕೆ ಜೋಡಿಸಿರುವ ಮೊಬೈಲ್ ಕೂಡಾ ಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನವೋದಯ ವಿದ್ಯಾಲಯ ಸಮಿತಿಯ ವೆಬ್ಸೈಟ್ www.navodaya.gov.in / https;/ navodaya.gov.in /nvs/nvs-school/ Dakshinakannada/en/homeನ್ನು ಹಾಗೂ ಪ್ರಾಂಶುಪಾಲರು, ನವೋದಯ ವಿದ್ಯಾಲಯ ಮುಡಿಪು ಇವರನ್ನು ಸಂಪರ್ಕಿಸಬಹುದು. ಫೋ: 08255-261300. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-08-2023. ದಿನಾಂಕ 20-01-2024 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.