ಮಹಾರಾಷ್ಟ್ರ: ವಿಭಜನೆಯೊಂದಿಗೆ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಯಶಸ್ಸು; ತಳಮಟ್ಟದಲ್ಲಿ ಅಸಮಾಧಾನದ ಹೊಗೆ
ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್, Photo: PTI
ಹೊಸದಿಲ್ಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಯಲ್ಲಿನ ವಿಭಜನೆಯೊಂದಿಗೆ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಮತ್ತೊಂದು ಯಶಸ್ಸನ್ನು ಗಳಿಸಿರಬಹುದು. ಆದರೆ ಸಂಘಟನೆಯ ಚುನಾವಣಾ ಹೆಜ್ಜೆಗುರುತನ್ನು ಮಹಾರಾಷ್ಟ್ರದಾದ್ಯಂತ ವಿಸ್ತರಿಸುವುದು ರಾಜ್ಯ ಬಿಜೆಪಿ ಘಟಕ ಎದುರಿಸುತ್ತಿರುವ ದೊಡ್ಡ ಪ್ರಶ್ನೆಯಾಗಿದೆ ಎಂದು Indian express ವರದಿ ಮಾಡಿದೆ.
ರಾಜ್ಯದ 288 ಅಸೆಂಬ್ಲಿ ಹಾಗೂ 48 ಲೋಕಸಭಾ ಕ್ಷೇತ್ರಗಳಿಗೆ ಸೀಟು ಹಂಚಿಕೆಗೆ ಬಂದಾಗ ಆಡಳಿತಾರೂಢ ಸಮ್ಮಿಶ್ರ ಸರಕಾರದಲ್ಲಿ ಮೂರು ಪಕ್ಷಗಳಿವೆ. ಹೀಗಾಗಿ ಬಿಜೆಪಿಯು ಕಡಿಮೆ ಸೀಟಿಗೆ ತೃಪ್ತಿಪಡಬೇಕಾಗುತ್ತದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್ಸಿಪಿ ಎಂಟು ಸ್ಥಾನಗಳಲ್ಲಿ ನೇರ ಹಣಾಹಣಿ ನಡೆಸಿದ್ದವು. ಎನ್ಸಿಪಿಯ ಸುಪ್ರಿಯಾ ಸುಳೆ ಗೆದ್ದಿದ್ದ ಬಾರಾಮತಿ ಹೊರತುಪಡಿಸಿ ಉಳಿದೆಲ್ಲ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ
ಏಕಕಾಲದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 288 ಸ್ಥಾನಗಳ ಪೈಕಿ 56 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಎನ್ಸಿಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈ ಪೈಕಿ ಬಿಜೆಪಿ 34 ಮತ್ತು ಎನ್ಸಿಪಿ 22 ಸ್ಥಾನಗಳನ್ನು ಗೆದ್ದಿವೆ.
2024 ರ ಮೇಲೆ ಕೇಂದ್ರೀಕರಿಸಬೇಕು, ಅದು ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಯುದ್ಧವಾಗಿದೆ ಎಂದು ರಾಜ್ಯದಲ್ಲಿ ಬಿಜೆಪಿಯ ಉನ್ನತ ನಾಯಕತ್ವವು ಖಾಸಗಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಪದೇ ಪದೇ ಕಾರ್ಯಕರ್ತರಿಗೆ ಸಂದೇಶವನ್ನು ನೀಡುತ್ತಿದೆ.. 2019 ರಲ್ಲಿ ನ ಸಾಧನೆ ಮೀರಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಗೆಲುವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಅವರಿಗೆ ತಿಳಿಸಲಾಗಿದೆ.
ಈ ಗುರಿಯನ್ನು ಸಾಧಿಸಲು, ಅವರು ಇತರ ಪಕ್ಷಗಳಿಗೆ - ಶಿವಸೇನೆ (ಶಿಂಧೆ ಬಣ), ಮತ್ತು ಈಗ ಅಜಿತ್ ಪವಾರ್ - ನೇತೃತ್ವದ ಎನ್ ಸಿಪಿಗೆ ಅವಕಾಶ ಕಲ್ಪಿಸಬೇಕು. ಇದು ಸಹಜವಾಗಿಯೇ ತಳಮಟ್ಟದಲ್ಲಿರುವ ಬಿಜೆಪಿಯ ಕಾರ್ಯಕರ್ತರ ಭವಿಷ್ಯಕ್ಕೆ ಘಾಸಿ ಉಂಟು ಮಾಡುತ್ತದೆ.
ಕಾರ್ಯಕರ್ತರ ಕಳವಳ ಅರ್ಥವಾಗುವಂತಹದ್ದಾಗಿದೆ. ಆದರೆ ಕೆಲವೊಮ್ಮೆ ನಾವು ದೊಡ್ಡ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯತಂತ್ರಗಳನ್ನು ರೂಪಿಸಬೇಕಾಗುತ್ತದೆ. ಮೋದಿ-ಶಾ ಆಡಳಿತದಲ್ಲಿ, ಮಹಾರಾಷ್ಟ್ರದಲ್ಲಿನ ಸಂಘಟನೆಯೊಳಗೆ ಯಾರೂ ಈ ನಿರ್ಧಾರಗಳನ್ನು ಪ್ರಶ್ನಿಸಲು ಸಿದ್ಧರಿಲ್ಲ. ಆದರೆ ಖಾಸಗಿಯಾಗಿ, ಪಕ್ಷವು ಹಿಂದೆ ಘೋಷಿಸಿದ್ದ 'ಷಟ್ ಪ್ರತಿಶತ್ ಭಾಜಪ’ (100% ಬಿಜೆಪಿ)' ತಂತ್ರವನ್ನು ಹಿನ್ನಲೆಯಲ್ಲಿ ಇರಿಸಲಾಗಿದೆ ಎಂದು ಹಲವರು ಒಪ್ಪಿಕೊಳ್ಳುತ್ತಾರೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.