ಡ್ರಗ್ಸ್ ಫ್ರೀ ಬೆಂಗಳೂರು ಮಾಡವುದು ನಮ್ಮ ಉದ್ದೇಶ: ಗೃಹ ಸಚಿವ ಡಾ. ಜಿ ಪರಮೇಶ್ವರ್
ಬೆಂಗಳೂರು: ರಾಜಧಾನಿಯಲ್ಲಿ ಮಾದಕ ವ್ಯಸ್ಯನ ದಂಧೆ ಹೆಚ್ಚಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ದಂಧೆಕೋರರ ವಿರುದ್ಧ ಕಠಿಣ ಕ್ರಮಗೊಳ್ಳಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೀಸಾ ಅವಧಿ ಮೀರಿದರೂ ಅಕ್ರಮ ವಾಸ ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿರುವ 106 ಮಂದಿ ಆರೋಪಿಗಳನ್ನು ಗಡೀಪಾರು ಮಾಡಲಾಗಿದೆ. ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ವಿದೇಶಾಂಗ ಇಲಾಖೆ ಮೂಲಕ ಮಾಹಿತಿ ನೀಡಲಾಗುವುದು. ಡ್ರಗ್ಸ್ ಫ್ರೀ ಬೆಂಗಳೂರು ಮಾಡಲು ನಮ್ಮ ಉದ್ದೇಶವಾಗಿದೆ ಎಂದರು.
ಪೊಲೀಸ್ ಇಲಾಖೆಯು ವರ್ಗಾವಣೆ ದಂಧೆಯಾಗುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಹಿಂದಿನ ಅವಧಿಯಲ್ಲಿ ವರ್ಗಾವಣೆ ದಂಧೆಯಾಗಿತ್ತು. ಈಗ ದಂಧೆ ಮಾಡಲು ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಪಿಎಸ್ ಐ ಕೇಸ್ ಬಗ್ಗೆ ತನಿಖೆ ನಡೆಯುತ್ತಿದೆ. ನೇಮಕಾತಿ ಬಗ್ಗೆ ಕೋರ್ಟ್ ನಲ್ಲಿ ತಡೆಯಾಜ್ಞೆ ಇದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಇಲಾಖೆಯಲ್ಲಿ ವರ್ಗಾವಣೆ ಪಾರದರ್ಶಕತೆಯಾಗಿ ಮಾಡಲಾಗುತ್ತೆ. ಎಂ ಎಲ್ ಎ ಗಳು ಕೆಲವು ಮಿನಿಟ್ ಕೊಡುವುದು ಸಂಪ್ರದಾಯವಾಗಿದೆ. ಅದನ್ನು ಬದಲಿಸಲು ಸಾಧ್ಯವಿಲ್ಲ. ಆದ್ರೆ ನಾನು ವರ್ಗಾವಣೆಯನ್ನು ದಂಧೆಯಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
2018 ರಿಂದ ಬೆಂಗಳೂರು ನಗರ ಸೇಫ್ ಸಿಟಿ ಯೋಜನೆ ಶೇ.70ರಷ್ಟು ಕೆಲಸ ಮುಗಿದಿದೆ. 7 ಸಾವಿರ ಸಿಸಿಟಿವಿ ಕ್ಯಾಮರಾಗಳ ಪೈಕಿ 5 ಸಾವಿರ ಕ್ಯಾಮರಾ ಅಳವಡಿಸಲಾಗಿದೆ. ನಗರದಲ್ಲಿರುವ 111 ಪೊಲೀಸ್ ಠಾಣೆಗಳ ಪೈಕಿ 80 ಪೊಲೀಸ್ ಠಾಣೆಗಳಲ್ಲಿ ವ್ಯೂವ್ ಸೆಂಟರ್ ತೆರೆಯಲಾಗಿದೆ. 50 ಸೇಫ್ಟಿ ಹೈಲಾಂಡ್ ಗಳ ಪೈಕಿ 30 ಹೈಲ್ಯಾಂಡ್ ತೆರೆಯಲಾಗಿದೆ. ಮಹಿಳೆಯರಿಗೆ ತೊಂದರೆಯಾದರೆ ಅಳವಡಿಕೆ ಹೈಲ್ಯಾಂಡ್ ಬಟನ್ ಒತ್ತಿದರೆ ನೇರವಾಗಿ ಕಮಾಂಡ್ ಸೆಂಟರ್ ಗೆ ಮಾಹಿತಿ ರವಾನೆಯಾಗಲಿದೆ. ಪೊಲೀಸರಿಗೆ ಈಗಾಗಲೇ ಬಾಡಿವೋರ್ನ್ ಕ್ಯಾಮರ ನೀಡಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊಬೈಲ್ ಕಮಾಂಡ್ ಸೆಂಟರ್ ತೆರೆದಿರುವುದಾಗಿ ಮಾಹಿತಿ ನೀಡಿದರು.