ಮಣಿಪುರದಲ್ಲಿನ ದೌರ್ಜನ್ಯ, ದುರಾಡಳಿತದ ವಿರುದ್ಧ ಜಿಲ್ಲಾದ್ಯಂತ ಪ್ರತಿಭಟನೆ: ಕಾಂಗ್ರೆಸ್
ಮಂಗಳೂರು, ಜು.23; ಕಳೆದ ಮೂರು ತಿಂಗಳಿನಿಂದ ಮಣಿಪುರ ಜನಾಂಗೀಯ ದ್ದೇಷದಿಂದ ಹೊತ್ತಿ ಉರಿಯುತ್ತಿದೆ.ಶಾಲೆ ಗಳು ಇನ್ನೂ ಆರಂಭವಾಗಿಲ್ಲ.ಕೃಷಿ ಚಟುವಟಿಕೆ ಗಳು,ವ್ಯಾಪಾರ ವಹಿವಾಟು ನಡೆಸಲಾರದ ಸ್ಥಿತಿಯಲ್ಲಿ ಜನರಿದ್ದಾರೆ.ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.ವಿಶ್ವ ಗುರು ಎಂದು ಹೇಳುತ್ತಿರುವ ಮೋದಿ ಮೌನವಹಿಸಿದ್ದಾರೆ. ಅಲ್ಲಿನ ಮುಖ್ಯ ಮಂತ್ರಿ ವಿಫಲರಾಗಿದ್ದಾರೆ. ಅವರು ತಕ್ಷಣ ರಾಜಿನಾಮೆ ನೀಡಬೇಕೆಂದು ಮತ್ತು ಅಲ್ಲಿನ ಜನರಿಗೆ ರಕ್ಷಣೆ ನೀಡಲು ಆಗ್ರಹಿಸಿ ಕಾಂಗ್ರೆಸ್ ಜು.24,25,26 ರಂದು ವಿವಿಧ ತಾಲೂಕು ಗಳಲ್ಲಿ ಹಾಗೂ ಜು.29ರಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಲಿದೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಒಂದು ದೂರವಾಣಿ ಕರೆಯಿಂದ ರಶ್ಯಾ -ಉಕ್ರೇನ್ ಯುದ್ಧ ಕೊನೆಗೊಳಿಸುವ ಬಿಜೆಪಿ ಮುಖಂಡರ ಹೇಳಿಕೆಯಂತೆ ದೇಶದೊಳಗೆ ಇರುವ ಪುಟ್ಟ ರಾಜ್ಯದ ಸಂಘರ್ಷ ವನ್ನು ಕೊನೆಗೊಳಿಸಲು ಏಕೆ ಪ್ರಯತ್ನ ಮಾಡುತ್ತಿಲ್ಲ? ವಿಪಕ್ಷ ಗಳ ಮುಖಂಡರಿಗೆ ಅಲ್ಲಿ ಹೋಗಲು ಅವಕಾಶ ನೀಡಲಾಗುತ್ತಿಲ್ಲ. ದೇಶದಲ್ಲಿ ಈ ರೀತಿಯ ದುರಾಡಳಿತ ಎಂದೂ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಬಿಲ್ಲವ ರ ಬಗ್ಗೆ ನೀಡಿದ ಹೇಳಿಕೆ ಯ ಬಗ್ಗೆ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಬಿ.ಕೆ.ಹರಿಪ್ರಸಾದ್ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಇದು ಅವರ ಪ್ರಶ್ನೆಗೆ ಉತ್ತರ ಅಲ್ಲ. ಆದರೆ ರಾಜ್ಯ ಸರಕಾರದಿಂದ ಬಿಲ್ಲವರಿಗೆ ಈಡಿಗರಿಗೆ ಅನ್ಯಾಯವಾಗಿಲ್ಲ ಈ ಬಗ್ಗೆ ಆರೋಪವನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು.
ಕರಾವಳಿಯ ಕೆಲವು ಶಾಸಕರಿಂದ ವಿಧಾನಸಭಾ ಕಲಾಪದಲ್ಲಿ ಅನಾಗರಿಕ ವರ್ತನೆ ಉಂಟಾಗಿದೆ. ದಲಿತ ಶಾಸಕರಾಗಿ ಸ್ಪೀಕರ್ ಹುದ್ದೆಗೆ ಏರಿದವರ ಸ್ಥಾನವನ್ನು ಪರಿಗಣಿಸದೆ ಜಿಲ್ಲೆಯ ಶಾಸಕರು ತೋರಿದ ವರ್ತನೆ ಜಿಲ್ಲೆಯ ಪ್ರಜ್ಞಾವಂತ ಮತದಾರರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿಮಾಜಿ ಶಾಸಕರಾದ ಐವನ್ ಡಿ ಸೋಜಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಕಾಶ್ ಬಿ ಸಾಲಿಯಾನ್, ಕುಮಾರಿ ಅಪ್ಪಿ, ಜಯಶೀಲಾ ಅಡ್ಯಂತಾಯ, ನಿರಾಜ್ ಪಾಲ್, ಆರಿಫ್ ಭಾವ , ಭಾಸ್ಕರ್ ರಾವ್, ಮಂಜುಳಾ ನಾಯಕ್, ಶುಭೋದಯ ಆಳ್ವಾ, ಅಬ್ದುಲ್ ಸಲೀಂ, ಸತೀಶ್ ಪೆಂಗಲ್, ಮೀನಾ ಟೆಲಿಸ್, ಹಬೀಬ್ ಕಣ್ಣೂರ್ ಉಪಸ್ಥಿತರಿದ್ದರು.