ಮಣಿಪುರದ ಎರಡು ಆಶ್ರಯ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದ ರಾಹುಲ್ ಗಾಂಧಿ
ಸಂತ್ರಸ್ತರ ನೋವು ಆಲಿಸಿದ ರಾಹುಲ್ ಗಾಂಧಿ, ಫೋಟೋ: Twitter@NDTV
ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ನಲ್ಲಿರುವ ಎರಡು ಆಶ್ರಯ ಶಿಬಿರಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 9:30ರ ಸುಮಾರಿಗೆ ಇಂಫಾಲ್ ನಿಂದ ಹೆಲಿಕಾಪ್ಟರ್ ಮೂಲಕ ಮೊಯಿರಾಂಗ್ ತಲುಪಿದ ರಾಹುಲ್ ಗಾಂಧಿ ಸಂತ್ರಸ್ತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಿದರು.
ರಾಹುಲ್ ಗಾಂಧಿ ಭೇಟಿ ನೀಡಿದ ಎರಡೂ ನಿರಾಶ್ರಿತ ಶಿಬಿರಗಳಲ್ಲಿ ಸುಮಾರು 1,000 ಜನರು ಆಶ್ರಯ ಪಡೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಪಿಟಿಐಗೆ ತಿಳಿಸಿವೆ.
ರಾಹುಲ್ ಗಾಂಧಿ ಅವರೊಂದಿಗೆ ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಪಿಸಿಸಿ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಸಿಂಗ್ ಹಾಗೂ ಮಾಜಿ ಸಂಸದ ಅಜಯ್ ಕುಮಾರ್ ಇದ್ದರು.
ರಾಹುಲ್ ಗಾಂಧಿ ಅವರು ಇಂಫಾಲ್ ನಲ್ಲಿ ಬುದ್ಧಿಜೀವಿಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ತಿಂಗಳಿಂದ ಈಶಾನ್ಯ ರಾಜ್ಯವನ್ನು ಬಾಧಿಸಿರುವ ಜನಾಂಗೀಯ ಗಲಭೆಯಲ್ಲಿ ಹೆಚ್ಚು ಹಾನಿಗೊಳಗಾದ ಪಟ್ಟಣಗಳಲ್ಲಿ ಒಂದಾದ ಚುರಚಂದಪುರದ ಪರಿಹಾರ ಶಿಬಿರಗಳಿಗೆ ಗುರುವಾರ ರಾಹುಲ್ ಭೇಟಿ ನೀಡಿದ್ದರು.