ಪಶ್ಚಿಮಬಂಗಾಳ: ಎರಡು ಗೂಡ್ಸ್ ರೈಲುಗಳ ನಡುವೆ ಢಿಕ್ಕಿ; ಹಳಿತಪ್ಪಿದ ಹಲವು ವ್ಯಾಗನ್ ಗಳು
ಬಂಕುರ: ಪಶ್ಚಿಮಬಂಗಾಳದ ಬಂಕುರಾದಲ್ಲಿ ರವಿವಾರ ಮುಂಜಾನೆ ಎರಡು ಗೂಡ್ಸ್ ರೈಲುಗಳು ಡಿಕ್ಕಿಯಾದ ನಂತರ ಹಲವು ವ್ಯಾಗನ್ ಗಳು ಹಳಿ ತಪ್ಪಿರುವ ಘಟನೆ ನಡೆದಿದೆ.
ಈ ಘಟನೆಯು ಬಂಗಾಳದ ಒಂಡಾ ಸ್ಟೇಶನ್ ಬಳಿ ನಡೆದಿದೆ.
ನಿಂತಿದ್ದ ರೈಲಿಗೆ ಮತ್ತೊಂದು ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಒಂದು ಗೂಡ್ಸ್ ರೈಲು ನಿಂತುಕೊಂಡಿತ್ತು. ಆಗ ಮತ್ತೊಂದು ಗೂಡ್ಸ್ ರೈಲು ಡಿಕ್ಕಿಯಾಗಿದೆ. ಸಮಗ್ರ ತನಿಖೆಯ ನಡೆದ ನಂತರವೇ ಹೆಚ್ಚಿನ ವಿವರಗಳು ಬಹಿರಂಗವಾಗಲಿವೆ ಎಂದು ಒಂಡಾ ಸ್ಟೇಶನ್ ನ ಸುರಕ್ಷತಾ ಅಧಿಕಾರಿ ದಿಬಾಕರ್ ಮಜಿಹಿ ಹೇಳಿದ್ದಾರೆ.
ಎರಡು ರೈಲುಗಳ ಡಿಕ್ಕಿಯ ನಂತರ ಖರಗ್ ಪುರ-ಬಂಕುರ-ಅಡ್ರಾ ನಡುವಿನ ರೈಲು ಸಂಚಾರ ಸ್ಥಗಿತವಾಗಿದೆ.
Next Story