ಸುಗ್ರೀವಾಜ್ಞೆ ವಿಚಾರದಲ್ಲಿನ ಭಿನ್ನಾಭಿಪ್ರಾಯ ಕೂತು ಬಗೆಹರಿಸಿಕೊಳ್ಳಿ: ಆಪ್, ಕಾಂಗ್ರೆಸ್ ಗೆ ಮಮತಾ ಬ್ಯಾನರ್ಜಿ ಕಿವಿಮಾತು
ಹೊಸದಿಲ್ಲಿ: ಟೀ ಹಾಗೂ ಬಿಸ್ಕತ್ ಸೇವನೆಯ ಮೂಲಕ ದಿಲ್ಲಿ ಸುಗ್ರೀವಾಜ್ಞೆ ವಿಚಾರದಲ್ಲಿ ಎಎಪಿ ಹಾಗೂ ಕಾಂಗ್ರೆಸ್ ತಮ್ಮ ಭಿನ್ನಾಭಿಪ್ರಾಯಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸಿಕೊಳ್ಳುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಸಲಹೆ ನೀಡಿದ್ದು, ಪಾಟ್ನಾ ಪ್ರತಿಪಕ್ಷಗಳ ಸಭೆ ಇಂತಹ ಚರ್ಚೆಗೆ ಸೂಕ್ತ ವೇದಿಕೆಯಲ್ಲ ಎಂದು ನೆನಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ದಿನದ ಉಪವಾಸದಲ್ಲಿರುವ ಮಮತಾ ಬ್ಯಾನರ್ಜಿ, ಸುಗ್ರೀವಾಜ್ಞೆಯ ಮೇಲಿನ ಕಿತ್ತಾಟವು ಚರ್ಚೆಗಳನ್ನು ಹಳಿತಪ್ಪಿಸುವುದಿಲ್ಲ ಎಂಬ ವಿಶ್ವಾಸದಲ್ಲಿದ್ದು, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸಭೆಯ ಕೊನೆಯಲ್ಲಿ ಸುಗ್ರೀವಾಜ್ಞೆ ವಿಷಯದಲ್ಲಿ ಎಎಪಿಗೆ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದಾಗ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ, ತಮ್ಮ ಭಾಷಣದಲ್ಲಿ ಎಎಪಿಗೆ ತಾತ್ವಿಕ ಬೆಂಬಲವನ್ನು ನೀಡಿದರು, ಪಕ್ಷವು ಸಂವಿಧಾನ ವಿರೋಧಿಯಾದ ಯಾವುದನ್ನೂ ಬೆಂಬಲಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ತಮ್ಮ ಪಕ್ಷವು ಒಂದು ರೀತಿಯ ಕಾರ್ಯವಿಧಾನವನ್ನು ಹೊಂದಿದೆ ಮತ್ತು ಅದರ ಬಗ್ಗೆ ಪ್ರಕಟಣೆಯನ್ನು ನಂತರದ ದಿನದಲ್ಲಿ ಮಾಡಲಾಗುವುದು. ಯಾವುದೇ ಹಂತದಲ್ಲೂ ಕೇಜ್ರಿವಾಲ್ ಸಭೆಯಿಂದ ಹೊರನಡೆಯುವುದಾಗಿ ಬೆದರಿಕೆ ಹಾಕಲಿಲ್ಲ ಎಂದು ಮೂಲಗಳು ತಿಳಿಸಿವೆ.
ಹಾಜರಿದ್ದ ಎಲ್ಲಾ ವಿರೋಧ ಪಕ್ಷದ ಸದಸ್ಯರು ಕಾಂಗ್ರೆಸ್ ಪರವಾಗಿ ನಿಂತರು ಮತ್ತು ಈ ವಿಷಯದ ಬಗ್ಗೆ ಪಕ್ಷದ ನಿಲುವು "ಸಮಂಜಸ" ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿಯವರು ತಮ್ಮ ಭಾಷಣದ ಸಮಯದಲ್ಲಿ ಸುಗ್ರೀವಾಜ್ಞೆಯ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಸಭೆಯಲ್ಲಿ ಭಾಗವಹಿಸಿರುವ ಪಕ್ಷಗಳು ಹಿಂದಿನ ಇಷ್ಟವಾದ, ಇಷ್ಟವಾಗದ ವಿಷಯವನ್ನು ಮರೆತು ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸಿದರು.