ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶಕ್ಕೆ ನಿಷೇಧ : ವಾರ್ತಾಭಾರತಿ ವರದಿ ಬಳಿಕ ಸಭೆ ಕರೆದ ತಹಶೀಲ್ದಾರ್
ಬೆಂಗಳೂರು: ತುಮಕೂರಿನ ತುರುವೇಕೆರೆ ತಾಲ್ಲೂಕಿನ ತುಯಲಹಳ್ಳಿ ಗ್ರಾಮದ ದೇವಾಲಯಗಳಿಗೆ ದಲಿತರಿಗೆ ಪ್ರವೇಶಕ್ಕೆ ನಿಷೇಧದ ಬಗ್ಗೆ ವಾರ್ತಾ ಭಾರತಿ ಡಿಜಿಟಲ್ ಚಾನಲ್ ಪ್ರಸಾರ ಮಾಡಿದ ವಿಶೇಷ ವರದಿಯನ್ನು ಆಧರಿಸಿ ಫೆ.7ರಂದು ತಹಸೀಲ್ದಾರ್ ರೇಣುಕುಮಾರ್ ಅವರು ಗ್ರಾಮದಲ್ಲಿ ಶಾಂತಿ ಸಮಾಲೋಚನಾ ಸಭೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ.
ವಾರ್ತಾಭಾರತಿ ಚಾನೆಲ್‌ನಲ್ಲಿ “ಜಾತ್ರೆಯ ಕೆಲ್ಸ ನಮ್ಮಲ್ಲೇ ಮಾಡಿಸ್ತಾರೆ, ದೇವಸ್ಥಾನಕ್ಕೆ ಹೋದ್ರೆ ಮೈಲಿಗೆ ಅಂತಾರೆ” ಎನ್ನುವ ಶೀರ್ಷಿಕೆಯಡಿಯಲ್ಲಿ ಕಳೆದ ಜ.25ರಂದು ಪ್ರಸಾರವಾಗಿದ್ದ ವಿಶೇಷ ಗ್ರೌಂಡ್ ರಿಪೋರ್ಟ್ ಅನ್ನು ಆಧರಿಸಿ ತುರುವೇಕೆರೆಯ ತಹಸೀಲ್ದಾರ್ ರೇಣುಕುಮಾರ್ ಅವರು, ಗ್ರಾಮದಲ್ಲಿ ಫೆ.7ಕ್ಕೆ ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ರಾಜಸ್ವ ನಿರೀಕ್ಷಕರು ಸೇರಿದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮ ಎಲ್ಲ ಸಮುದಾಯದವರನ್ನು ಒಳಗೊಂಡು ಶಾಂತಿ ಸಮಾಲೋಚನಾ ಸಭೆಯಲ್ಲಿ ನಡೆಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
“ಜಾತ್ರೆಯ ಕೆಲ್ಸ ನಮ್ಮಲ್ಲೇ ಮಾಡಿಸ್ತಾರೆ, ದೇವಸ್ಥಾನಕ್ಕೆ ಹೋದ್ರೆ ಮೈಲಿಗೆ ಅಂತಾರೆ” ವಿಶೇಷ ಗ್ರೌಂಡ್ ರಿಪೋರ್ಟ್ ವಿಡಿಯೋವನ್ನು ಈ ಕೆಳಗಡೆ ವೀಕ್ಷಿಸಿ