ಹೌಸ್ ಅರೆಸ್ಟ್ ಬೆದರಿಕೆ: ಹಿರಿಯ ನಾಗರಿಕರಿಗೆ 10ಲಕ್ಷ ರೂ. ವಂಚನೆ
ಶಂಕರನಾರಾಯಣ, ಜ.8: ಮುಂಬೈ ಕ್ರೈಮ್ ಪೊಲೀಸರು ಹೌಸ್ ಅರೆಸ್ಟ್ ಮಾಡಿರುವುದಾಗಿ ಹೆದರಿಸಿ ವೃದ್ಧರೊಬ್ಬರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಗ್ರಾಮದ ಮಂಜು ಕೆ.(75) ಎಂಬವರಿಗೆ ಮುಂಬೈ ತಿಲಕ ನಗರ ಠಾಣೆಯ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬರು ನಿಮ್ಮ ಮೇಲೆ 17 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ನೀವು ಹಿರಿಯ ನಾಗರಿಕರು ಆಗಿರುವುದರಿಂದ ನಿಮ್ಮನ್ನು ಹೌಸ್ ಅರೆಸ್ಟ್ ಮಾಡಿ ಮನೆ ಯಿಂದಲೇ ತನಿಖೆ ಮಾಡುತ್ತೇವೆ, ನೀವು ಹೊರಗೆ ಹೋಗು ವಂತಿಲ್ಲ ಎಂದು ಬೆದರಿಸಿದರು. ಇದರಿಂದ ಹೆದರಿದ ಮಂಜು ಕೆ. ತಮ್ಮ ಖಾತೆಯಲ್ಲಿದ್ದ ಒಟ್ಟು 10,39,000ರೂ ಹಣವನ್ನು ಆರೋಪಿತರ ಖಾತೆಗೆ ವರ್ಗಾವಣೆ ಮಾಡಿ ವಂಚನೆಗೆ ಒಳಗಾದರೆಂದು ದೂರಿನಲ್ಲಿ ತಿಳಿಸಲಾಗಿದೆ.
Next Story