ಹೂಡಿಕೆ ಹೆಸರಿನಲ್ಲಿ ಮಹಿಳೆಗೆ 1.12 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಬ್ರಹ್ಮಾವರ, ಜ.13: ಮಹಿಳೆಯೊಬ್ಬರಿಗೆ ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ತಾಡಿ ಗ್ರಾಮದ ಪಲ್ಲವಿ ಬಿ.(30) ಎಂಬವರು ವಾಟ್ಸಾಪ್ ಗ್ರೂಪಿನಲ್ಲಿ ಬಂದ ಮಾಹಿತಿಯನ್ನು ನಂಬಿ ಡಿ.3ರಂದು ಮತ್ತು ಡಿ.4ರಂದು ಒಟ್ಟು 1,12,000ರೂ. ಹಣವನ್ನು ಹೂಡಿಕೆ ಮಾಡುವ ಬಗ್ಗೆ ಆರೋಪಿ ತಿಳಿಸಿದ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಈವರೆಗೆ ಆ ಹಣವನ್ನು ವಾಪಾಸ್ಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
Next Story