ಕುಂದಾಪುರ: ಮನೆಗೆ ನುಗ್ಗಿ 18.52 ಲಕ್ಷ ರೂ. ಮೌಲ್ಯದ ನಗನಗದು ಕಳವು
ಕುಂದಾಪುರ, ಡಿ.22: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ವಜ್ರದ ಆಭರಣ ಹಾಗೂ ನಗದನ್ನು ಕಳವು ಮಾಡಿರುವ ಘಟನೆ ವಡೇರ ಹೋಬಳಿ ಗ್ರಾಮದ ಜೆಎಲ್ಬಿ ರಸ್ತೆಯಲ್ಲಿ ನಡೆದಿದೆ.
ಶಿವರಾಮ್ ಹಾಗೂ ಅವರ ಹೆಂಡತಿ ಕೆಲಸದ ನಿಮಿತ್ತ ಡಿ.18ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ಡಿ.21ರಂದು ಬೆಳಗ್ಗೆ ಶಿವರಾಮ್ ಅವರ ಸ್ನೇಹಿತ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ದ್ವಾರದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ರೂಮ್ ನಲ್ಲಿದ್ದ 8.52ಲಕ್ಷ ರೂ. ಮೌಲ್ಯದ ಸುಮಾರು 142 ಗ್ರಾಂ ತೂಕದ ವಿವಿಧ ಬಗೆಯ ಚಿನ್ನಾಭರಣಗಳು ಹಾಗೂ 8ಲಕ್ಷ ರೂ. ಮೌಲ್ಯದ 40ಗ್ರಾಂ ವಜ್ರದ ಆಭರಣಗಳು ಮತ್ತು 2ಲಕ್ಷ ರೂ. ನಗದು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 18.52ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story