ಮಲ್ಪೆ: ಎ.19ರಂದು ಕಲ್ಕೂರ ಬೀಚ್ ಫೆಸ್ಟಿವಲ್

ಉಡುಪಿ, ಎ.18: ಇಲ್ಲಿನ ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಪ್‌ಮೆಂಟ್ಸ್ ಸಂಸ್ಥೆಯ ವತಿಯಿಂದ ಇದೇ ಎ.19ರಂದು ಮಲ್ಪೆ ಬೀಚ್‌ನಲ್ಲಿ ಕಲ್ಕೂರ ಬೀಚ್ ಫೆಸ್ಟಿವಲ್ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಆಯೋಜಿಸಲಾಗಿದೆ.
ಸಂಸ್ಥೆಯ ಮಾಲಕರಾಗಿರುವ ರಂಜನ್ ಕಲ್ಕೂರ ಅವರು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಸಂಸ್ಥೆಯ 40ನೇ ವರ್ಷಾಚರಣೆ ಪ್ರಯುಕ್ತ ಕಲ್ಕೂರ ಬಿಲ್ಡರ್ಸ್ ಹಾಗೂ ಡೆವಲಪರ್ಸ್‌ನ ಐದು ಅಪಾರ್ಟ್‌ಮೆಂಟ್‌ಗಳಿಗೆ ಮನೆಯ ಒಳಗಿನ ಇಂಟೀರಿಯರ್ ಸ್ಪರ್ಧೆ ಏರ್ಪಡಿಸಿದ್ದು, ಇದರ ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸ ಲಾಗುವುದು ಎಂದರು.
ಸ್ಪರ್ಧೆಯಲ್ಲಿ ಒಟ್ಟು 75 ಪ್ರಶಸ್ತಿಗಳಿದ್ದು, ಇದರಲ್ಲಿ ವಿಜೇತರಾದವರಿಗೆ ಅಂದು ಸಂಜೆ ಮಲ್ಪೆ ಸಮುದ್ರ ಕಿನಾರೆಯಲ್ಲಿ ಆಯೋಜಿಸುವ ಕಲ್ಕೂರ ಬೀಚ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾ ಗುತ್ತದೆ ಎಂದರು.
ಕಾರ್ಯಕ್ರಮ ಎ.19ರ ಕಾರ್ಯಕ್ರಮ ಸಂಜೆ 4:00ರಿಂದ ರಾತ್ರಿ 10:00 ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ತರಾನಾ ಸಂಗೀತ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಸಂಸದರು, ಶಾಸಕರು, ಗಣ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಕಲ್ಕೂರ, ರುಶಾನ್ ಕಲ್ಕೂರ, ಹರೀಶ್ ಕಲ್ಕೂರ, ಚಂದ್ರಕಾಂತ್, ರಾಜೇಶ್ ಪಣಿಯಾಡಿ ಉಪಸ್ಥಿತರಿದ್ದರು.