ನಿಕ್ಷಯಾ ಅಭಿಯಾನ -2025 ಸಮ್ಮೇಳನ ಉದ್ಘಾಟನೆ

ಉಡುಪಿ: ಉಡುಪಿ ಎಸ್‌ಡಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ವಸ್ಥವೃತ್ತ ಮತ್ತು ಯೋಗ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಿಕ್ಷಯಾ ಅಭಿಯಾನ 2025 ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಸಮ್ಮೇಳನವನ್ನು ಮೈಸೂರು ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಶೆಣೈ ಉದ್ಘಾಟಿಸಿ, ಟಿಬಿ ನಿಯಂತ್ರಣದ ಆಯುರ್ವೇದೀಯ ವೈಖರಿ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು.
ಡಬ್ಲ್ಯುಎಚ್‌ಓ ವೈದ್ಯಕೀಯ ಸಲಹೆಗಾರ ಡಾ.ಜೋಸ್ ಜೋಮ್ ಥೋಮಸ್, ಜಿಲ್ಲಾ ಟಿಬಿ ಅಧಿಕಾರಿ ಡಾ.ಚಿದಾನಂದ್ ಸಂಜು, ಮೈಸೂರು ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಮಾಜಿ ಪ್ರಾಧ್ಯಾಪಕ ಡಾ.ಸದಾನಂದ ಪರಗೋಂಡೆ, ಉಪಸ್ಥಿತರಿದ್ದರು.
ನಿಕ್ಷಯಾ ಅಭಿಯಾನದ ಮುಖ್ಯ ಆಯೋಜನಾ ಕಾರ್ಯದರ್ಶಿ ಡಾ.ವಿಜಯ್ ಬಿ.ನೆಗಳೂರ್ ಸ್ವಾಗತಿಸಿ ದರು. ಡಾ.ಶ್ರೀನಿಧಿ ಧನ್ಯಾ ಬಿ.ಎಸ್. ವಂದಿಸಿದರು. ಸಮ್ಮೇಳನದ ವೈಜ್ಞಾನಿಕ ಅಧಿವೇಶನಗಳಲ್ಲಿ, ಡಾ.ಚಿದಾನಂದ್ ಸಂಜು, ಡಾ.ಜೋಸ್ ಜೋಮ್ ಥೋಮಸ್, ಡಾ.ವೃಂದಾ ಮಾರಿಯಾ, ಡಾ. ನಾಗರಾಜ್ ಎಸ್. ಹಾಗೂ ಡಾ.ಬಿ.ಗುರುಬಾಸವರಾಜ್ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ.ನಾಗರಾಜ್ ಎಸ್. ವಹಿಸಿದ್ದರು. ಡಾ.ಲಕ್ಷ್ಮಿ ನಾರಾಯಣ ಶೆಣೈ, ಡಾ.ಮಮತಾ ಕೆ.ವಿ., ಡಾ.ವಿಜಯ್ ಬಿ.ನೆಗಳೂರ್, ಡಾ.ವೀರಕುಮಾರ್ ಕೆ. ಅವರನ್ನು ಸನ್ಮಾನಿಸಲಾಯಿತು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವೈದ್ಯರು, ಮತ್ತು ತಜ್ಞರು ಭಾಗವಹಿಸಿ ದ್ದರು. ಡಾ.ಸೌಮ್ಯಾ ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ಡಾ.ಆಶ್ರಿತ ಹಾಗು ಡಾ.ಹರ್ಷಿತ ವಿ. ಕಾರ್ಯಕ್ರಮ ನಿರೂಪಿಸಿದರು.