ಉಡುಪಿ: ನ.26ರಂದು ಕಸ ಸಂಗ್ರಹಣೆ ಇಲ್ಲ
ಉಡುಪಿ, ನ.25: ಉಡುಪಿ ನಗರಸಭೆಯ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ನ. 26ರಂದು ನಗರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಪೌರಕಾರ್ಮಿಕರ ದಿನಾಚರಣೆ: ಉಡುಪಿ ನಗರಸಭೆಯ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಮಂಗಳವಾರ ನ.26ರ ಬೆಳಗ್ಗೆ 9:30ಕ್ಕೆ ನಗರದ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಹಾಗೂ ಅಂದು ಬೆಳಗ್ಗೆ 7:30ಕ್ಕೆ ಉಡುಪಿ ನಗರಸಭಾ ಕಚೇರಿಯಿಂದ ಪುರಭವನದವರೆಗೆ ಪೌರಕಾರ್ಮಿಕರ ಮೆರವಣಿಗೆ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Next Story