ಬೆಂಗಳೂರು-ಕಾರವಾರ ರೈಲಿಗೆ 3 ಹೆಚ್ಚುವರಿ ಬೋಗಿ
ಉಡುಪಿ, ನ.1: ಪ್ರಯಾಣಿಕರ ಅಧಿಕ ಒತ್ತಡದ ಕಾರಣ ಕಾರವಾರ- ಬೆಂಗಳೂರು ನಡುವೆ ಸಂಚರಿಸುವ ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ರೈಲಿಗೆ (ನಂ.16595/16596) ತಾತ್ಕಾಲಿಕ ನೆಲೆಯಲ್ಲಿ ಮೂರು ಹೆಚ್ಚುವರಿ ಎಸಿ ಬೋಗಿಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ನ.2ರಿಂದ ಈ ರೈಲು ಎರಡು 3ಟಯರ್ ಎಸಿ ಬೋಗಿ ಹಾಗೂ ಒಂದು 2ಟಯರ್ ಎಸಿ ಬೋಗಿಯೊಂದಿಗೆ ಸಂಚರಿಸಲಿದೆ. ಹೀಗಾಗಿ ಇದುವರೆಗೆ 14 ಬೋಗಿಗಳೊಂದಿಗೆ ಸಂಚರಿಸುತಿದ್ದ ಈ ರೈಲು, ಇನ್ನು ಒಟ್ಟು 17 ಬೋಗಿಗಳೊಂದಿಗೆ ಓಡಾಟ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರವಾರದಿಂದ ಈ ರೈಲನ್ನು ತಾತ್ಕಾಲಿಕವಾಗಿ ಮಡಗಾಂವ್ ಜಂಕ್ಷನ್ವರೆಗೆ ಓಡಿಸಲಾಗುತ್ತದೆ ಎಂದೂ ಪ್ರಕಟಣೆ ತಿಳಿಸಿದೆ.
ಉದ್ನಾ-ಮಂಗಳೂರು ಜಂಕ್ಷನ್: ಪ್ರಯಾಣಿಕರ ದಟ್ಟಣೆಯಿಂದ ಉದ್ನಾ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ರೈಲಿಗೂ ನ.3ರಿಂದ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ಲೀಪರ್ ಕೋಚ್ನ್ನು ಸೇರ್ಪಡೆಗೊಳಿಸಲಾಗುವುದು ಎಂದೂ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story