ಉದ್ಯಾವರ: ಜ.3ಕ್ಕೆ ವರ್ಷದ ಹರ್ಷ ಮುಂದೂಡಿಕೆ
ಉದ್ಯಾವರ, ಡಿ.30:ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಾರ್ಥ ಮುಂದೂಡಲ್ಪಟ್ಟ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ‘ವರ್ಷದ ಹರ್ಷ-164’ ಜ.3ರ ಸಂಜೆ 5ಕ್ಕೆ ಜರಗಲಿದೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ, ಕಾಪು ಉಳಿಯಾರುಗೋಳಿ ದಂಡತೀರ್ಥ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಮರೀನಾ ಸರೋಜಾ ಸೋನ್ಸ್, ಹಳೆ ವಿದ್ಯಾರ್ಥಿ ಕಿದಿಯೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶೈಲಜಾ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ನೃತ್ಯವೈವಿಧ್ಯ ಮತ್ತು ಮಕ್ಕಳ ನಾಟಕ ‘ಹಕ್ಕಿಯ ಹಾಡು’ (ರ: ಕೋಡಿಗಾನಹಳ್ಳಿ ರಾಮಯ್ಯ, ನಿ: ರಾಜು ಮಣಿಪಾಲ) ಪ್ರದರ್ಶನಗೊಳ್ಳಲಿದೆ ಎಂದು ಮುಖ್ಯ ಶಿಕ್ಷಕಿ ರತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story