ಸಾಸ್ತಾನ ಟೋಲ್ ವಿರುದ್ಧದ ಡಿ.31ರ ಪ್ರತಿಭಟನೆ ರದ್ದು
ಉಡುಪಿ, ಡಿ.30: ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಾಸ್ತಾನ ಟೋಲ್‌ಗೆ ಸಂಬಂಧಿಸಿದ ಸಭೆಯಲ್ಲಿ ಟಿಪ್ಪರ್ ಮತ್ತು ಲಾರಿ ಹೊರತು ಪಡಿಸಿ ಉಳಿದೆಲ್ಲ ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ನೀಡಿರುವುದ ರಿಂದ ಡಿ.31ರಂದು ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನಡೆಸಲು ಉದ್ದೇಶಿದ್ದ ಕೋಟ ಜಿಪಂ ವ್ಯಾಪ್ತಿಯ ಅಂಗಡಿ ಮುಗ್ಗಟ್ಟು ಬಂದ್ ಹಾಗೂ ಪ್ರತಿಭಟನೆಯನ್ನು ಕೈಬಿಡಲಾಗಿದೆ.
ಸಭೆಯಲ್ಲಿ ಟಿಪ್ಪರ್ ಮತ್ತು ಲಾರಿ ಹೊರತು ಪಡಿಸಿ ಉಳಿದೆಲ್ಲ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದ್ದು, ಲಾರಿ ಮತ್ತು ಟಿಪ್ಪರ್‌ಗೆ ನೀಡುವ ತಿಂಗಳ ಪಾಸ್‌ಗೆ 6700ರೂ. ಪಾವತಿಸಿದರೆ ಮಿತಿ ಇಲ್ಲದೆ ಟೋಲ್‌ನಲ್ಲಿ ಸಂಚರಿಸಬಹುದು ಎಂಬ ತೀರ್ಮಾನ ಮಾಡಲಾಗಿದೆ ಎಂದು ಸಮಿತಿಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story