ಸೈಬರ್ ವಂಚಕರಿಂದ 5ಲಕ್ಷ ರೂ. ಮೋಸ: ಪ್ರಕರಣ ದಾಖಲು
ಹಿರಿಯಡ್ಕ, ನ.5: ಸೈಬರ್ ವಂಚಕರು ಓಟಿಪಿ ಪಡೆದು ಲಕ್ಷಾಂತರ ರೂ. ಹಣ ಮೋಸ ಮಾಡಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕೆಹಳ್ಳಿಯ ಸ್ವಸ್ತಿಕಾ(26) ಎಂಬವರಿಗೆ ನ.4ರಂದು ಮೊಬೈಲ್ ಕರೆ ಬಂದಿದ್ದು ಆ ವ್ಯಕ್ತಿ ಕಂಪೆನಿಯೊಂದು ಪಾರ್ಸೆಲ್ ಕಳುಹಿಸಿದ್ದು ಈ ಪಾರ್ಸೆಲ್ ನಲ್ಲಿ ಡ್ರಗ್ಸ್ ಇರುವುದಾಗಿ ಹೇಳಿದ್ದರು. ವಂಚರು ಸ್ವಸ್ತಿಕಾ ಅವರಲ್ಲಿ ಓಟಿಪಿ ನಂಬರ್ ಕೇಳಿದ್ದರು. ಸ್ವಸ್ತಿಕಾ ಅತುರದಿಂದ ಓಟಿಪಿಯನ್ನು ನೀಡಿದ ಪರಿಣಾಮ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ ನಗದು ಕಡಿತವಾಗಿದೆ. ಈ ಮೂಲಕ ಆನ್ಲೈನ್ ಮೂಲಕ ಸೈಬರ್ ವಂಚಕರು ವಂಚಿಸಿರುವುದಾಗಿ ದೂರಲಾಗಿದೆ.
Next Story