ಡಿ.19-20: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾನ್ಫರೆನ್ಸ್ 'ಐಸಿಇಟಿಇ-2023'
ಕಾರ್ಕಳ, ಡಿ.17: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿ.19 ಮತ್ತು 20ರಂದು ಅಂತಾರಾಷ್ಟ್ರ ಮಟ್ಟದ ಕಾನ್ಫರೆನ್ಸ್ 'ಐ.ಸಿ.ಇ.ಟಿ.ಇ' ಆಯೋಜಿಸಲಾಗಿದೆ. ಈ ಬಾರಿ ಏಳು ವಿವಿಧ ಅಂತಾರಾಷ್ಟ್ರೀಯ ಮಟ್ಟದ ಮಲ್ಟಿ-ಕಾನ್ಫರೆನ್ಸ್ ನ್ನು ಕಾಲೇಜು ಆಯೋಜಿಸಿದೆ.
ಬಯೋಟೆಕ್ನಾಲಜಿ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ನರ್ಚರಿಂಗ್ ಇನ್ನೋವೇಟಿವ್ ಟೆಕ್ನಾಲಾಜಿಕಲ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್- ಬಯೋಸೈನ್ಸ್' ಎಂಬ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಸಿವಿಲ್ ಇಂಜಿನಿಯರಿಂಗ್ ಟ್ರೆಂಡ್ಸ್ ಆ್ಯಂಡ್ ಚ್ಯಾಲೆಂಜಸ್ ಫಾರ್ ಸಸ್ಟೈನೆಬಿಲಿಟಿ' ಎಂಬ ಕಾನ್ಫರೆನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಕಂಪ್ಯೂಟರ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್, ಎಂಸಿಎ ವಿಭಾಗಗಳ ಜಂಟಿ ಆಶ್ರಯದಲ್ಲಿ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಡೇಟಾ ಇಂಜಿನಿಯರಿಂಗ್', ಇಲೆಕ್ಟ್ರಿಕಲ್ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಎಡ್ವಾನ್ಸಸ್ ಇನ್ ರಿನೀವೇಬಲ್ ಎನರ್ಜಿ & ಇಲೆಕ್ಟ್ರಿಕ್ ವೆಹಿಕಲ್, ಇಲೆಕ್ಟ್ರಾನಿಕ್ಸ್ ವಿಭಾಗದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ವಿ.ಎಲ್.ಎಸ್.ಐ, ಸಿಗ್ನಲ್ ಪ್ರೊಸೆಸಿಂಗ್, ಪವರ್ ಇಲೆಕ್ಟ್ರಾನಿಕ್ಸ್, ಐಒಟಿ, ಕಮ್ಯೂನಿಕೇಶನ್ ಆ್ಯಂಡ್ ಎಂಬೆಡೆಡ್ ಸಿಸ್ಟಮ್ಸ್', ಮೆಕ್ಯಾನಿಕಲ್ ಹಾಗೂ ರೋಬೋಟಿಕ್ಸ್ ವಿಭಾಗದ 'ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಆನ್ ಸ್ಮಾರ್ಟ್ ಆ್ಯಂಡ್ ಸಸ್ಟೈನೇಬಲ್ ಡೆವಲಪ್ ಮೆಂಟ್ಸ್ ಇನ್ ಮೆಟೀರಿಯಲ್ಸ್, ಮ್ಯಾನುಫ್ಯಾಕ್ಚರಿಂಗ್ ಆ್ಯಂಡ್ ಎನರ್ಜಿ ಇಂಜಿನಿಯರಿಂಗ್' ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗದ ವತಿಯಿಂದ 'ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಆನ್ ಮೆಟೀರಿಯಲ್ಸ್ ಸೈನ್ಸ್ ಆ್ಯಂಡ್ ಮ್ಯಾತಮೆಟಿಕ್ಸ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ' ಎಂಬ ವಿವಿಧ ವಿಷಯಗಳ ಬಗೆಗೆ ಒಟ್ಟು ಏಳು ಕಾನ್ಫರೆನ್ಸ್ ಗಳನ್ನು ಹಮ್ಮಿಕೊಳ್ಳಲಾಗಿದೆ.
ನಿಟ್ಟೆ ಪರಿಗಣಿತ ವಿವಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಅಮೆರಿಕದ ಪರ್ಡು ವಿಶ್ವವಿದ್ಯಾನಿಲಯದ ಮಲ್ಟಿಫೇಸ್ ಆ್ಯಂಡ್ ಫ್ಯೂಯೆಲ್ ಸೆಲ್ ರಿಸರ್ಚ್ ಲ್ಯಾಬ್ಸ್ ನಿರ್ದೇಶಕ ಪ್ರೊ.ಡಾ.ಶ್ರೀಪಾದ್ ಟಿ.ರೆವಣ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಟೆಕ್ನಿಕಲ್ ಎಜುಕೇಶನ್ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ, ಆಟೋಲಿವ್ ಸಂಸ್ಥೆಯ ಅಸೋಸಿಯೇಟ್ ಉಪಾಧ್ಯಕ್ಷ ಕಿರಣ್ ಶೀಲಾವಂತ್, ಎಲ್ ಆ್ಯಂಡ್ ಟಿ ಸಂಸ್ಥೆಯ ಸಲಹೆಗಾರ ನಿರಂಜನ್ ಸಿಂಹ ಮತ್ತು ಜಪಾನ್ ನ ನಿಡೆಕ್ ಸಂಸ್ಥೆಯ ಜನರಲ್ ಮ್ಯಾನೇಜರ್ ತಕಶಿ ಮಿಯಸಕ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ಈ ಎರಡು ದಿನಗಳ ಕಾನ್ಫರೆನ್ಸ್ ನ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಿವಿಧ ವಿಭಾಗಗಳ 20 ಸಾಧಕರು ದಿಕ್ಸೂಚಿ ಭಾಷಣಗಳನ್ನು ನಡೆಸಲಿರುವರು. ಸಂಶೋಧಕರಿಂದ 600 ಸಂಶೋಧನಾ ಪ್ರಬಂಧಗಳು ಬಂದಿದ್ದು ತಜ್ಞರ ಪರಿಶೀಲನೆಯ ಬಳಿಕ 260 ಪ್ರಬಂಧಗಳನ್ನು ಮಂಡನೆಗಾಗಿ ಆಹ್ವಾನಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.