ಡಿ.22ರಂದು ಸಾಣೂರಿನಲ್ಲಿ 'ಮಿಶ್ರತಳಿ ಕರು, ಹಸು ಪ್ರದರ್ಶನ -ಸ್ಪರ್ಧೆ'
ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್, ಪಶು ಸಂಗೋಪನೆ ಹಾಗೂ ಪಶು ವೈದ್ಯ ಸೇವಾ ಇಲಾಖೆ ಕಾರ್ಕಳ, ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ಉದಯರವಿ ಕಲಾವೃಂದ (ರಿ.), ಮುದ್ದಣ್ಣ ನಗರ, ಸಾಣೂರು ಇವರ ಸಹಭಾಗಿತ್ವದಲ್ಲಿ 'ಮಿಶ್ರ ತಳಿ ಕರು ಮತ್ತು ಹಸು ಪ್ರದರ್ಶನ _ಸ್ಪರ್ಧೆ'ಯನ್ನು ಡಿ.22ರಂದು ಸಾಣೂರು ಗರಡಿ ಬಳಿಯ ಉದಯ ರವಿ ಕಲಾವೃಂದದ ವಠಾರದಲ್ಲಿ ಏರ್ಪಡಿಸಲಾಗಿದೆ.
ಬೆಳಿಗ್ಗೆ 9:30ಕ್ಕೆ ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಡುಪಿ ಜಿಲ್ಲೆಯ ಉಪನಿರ್ದೇಶಕ ಡಾ.ರೆಡ್ಡಪ್ಪ ಸ್ಪರ್ಧೆಯನ್ನು ಉದ್ಘಾಟಿಸುವರು. ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್, ಬೋಳ ಸದಾಶಿವ ಶೆಟ್ಟಿ, ಸ್ಮಿತಾ ಆರ್ .ಶೆಟ್ಟಿ ಸೂಡ, ಮುಡಾರು ಸುಧಾಕರ್ ಶೆಟ್ಟಿ ಭಾಗವಹಿಸುವರು.
ಸಾಣೂರು ಗ್ರಾಮದ ಎಲ್ಲಾ ಹೈನುಗಾರರು ತಮ್ಮ ಕರು ಮತ್ತು ಹಸುಗಳ ಜೊತೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಎಚ್.ಎಫ್, ಜೆರ್ಸಿ ದೇಶಿಯ ಮತ್ತು ಕರುಗಳ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರಥಮ ದ್ವಿತೀಯ ತೃತೀಯ ಸ್ಥಾನಿ ಕರು ಮತ್ತು ಹಸುಗಳ ಮಾಲಕರಿಗೆ ಆಕರ್ಷಕ ಪುರಸ್ಕಾರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ದನಕರುಗಳ ಮಾಲಕರಿಗೆ 5 ಕೆಜಿ ನಂದಿನಿ ಪಶು ಆಹಾರ ಮತ್ತು ಆಕರ್ಷಕ ಬಹುಪಯೋಗಿ ಸ್ಟೀಲ್ ಪಾತ್ರೆಯನ್ನು ಉಚಿತವಾಗಿ ನೀಡಲಾಗುವುದು.
ಹೈನುಗಾರಿಕೆಗೆ ಮತ್ತು ಶುದ್ಧ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.