ನ.28: ಉಚಿತ ವಾಕ್, ಶ್ರವಣದೋಷ ತಪಾಸಣಾ ಶಿಬಿರ; ಶ್ರವಣಯಂತ್ರ ವಿತರಣೆ
ಉಡುಪಿ, ನ.27: ರೋಟರಿ ಕ್ಲಬ್ ಕಲ್ಯಾಣಪುರ, ಲಯನ್ಸ್ ಮತ್ತು ಲಿಯೋಕ್ಲಬ್ ಉಡುಪಿ ಹಾಗೂ ಕೊಡವೂರಿನ ಅಮೃತ್ ದಿವ್ಯಾಂಗ ರಕ್ಷಣಾ ಸಮಿತಿಗಳ ಆಶ್ರಯದಲ್ಲಿ ನ.28ರ ಗುರುವಾರ ಅಂಬಾಗಿಲಿನ ಅಮೃತ್ ಗಾರ್ಡನ್ನಲ್ಲಿ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಮೈಸೂರು ಹಾಗೂ ನಕ್ರೆಯ ಆದಿತ್ಯ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ವಾಕ್ ಮತ್ತು ಶ್ರವಣದೋಷ ತಪಾಸಣಾ ಶಿಬಿರ ಹಾಗೂ ಶ್ರವಣಯಂತ್ರ ವಿತರಣೆಯು ನಡೆಯಲಿದೆ.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಮೈಸೂರಿನ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ. ಎಮ್. ಪುಷ್ಪಾವತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ಆಗಮಿಸುವಾಗ ಫಲಾನುಭವಿಗಳು ಈ ಕೆಳಗಿನ ಅಗತ್ಯ ದಾಖಲೆಗಳನ್ನು ತರುವಂತೆ ಸೂಚಿಸ ಲಾಗಿದೆ. ಇತ್ತೀಚಿನ ಭಾವಚಿತ್ರ 3 ಪ್ರತಿ, ಆಧಾರ ಕಾರ್ಡ್ನ ಮೂಲ ಪ್ರತಿ ಹಾಗೂ 3 ನಕಲು ಪ್ರತಿ, ಬಿಪಿಎಲ್ ಕಾರ್ಡ್/ ಅಂತ್ಯೋದಯ ಕಾರ್ಡ್ ಮೂಲ ಪ್ರತಿ ಹಾಗೂ 3 ನಕಲು ಪ್ರತಿ.
ಬಿ.ಪಿ.ಎಲ್. ಕಾರ್ಡ್ / ಅಂತ್ಯೋದಯ ಕಾರ್ಡ್ 5 ವರ್ಷಕ್ಕಿಂತ ಮೇಲ್ಪಟ್ಟು ಇದ್ದಲ್ಲಿ ಆದಾಯ ರೂ.1,80,000ರೂ. ಒಳಗಿನ ಪ್ರಮಾಣ ಪತ್ರದ ಮೂಲ ಪ್ರತಿ ಹಾಗೂ 3 ನಕಲು ಪ್ರತಿ. 15 ವರ್ಷದ ಒಳಗಿನ ಮಕ್ಕಳು ಫಲಾನುಭವಿಯಾದಲ್ಲಿ ತಂದೆ/ತಾಯಿಯ ಭಾವಚಿತ್ರ 3 ಪ್ರತಿ, ಆಧಾರ ಕಾರ್ಡಿನ ಮೂಲ ಪ್ರತಿ ಹಾಗೂ ಬಿಪಿಎಲ್ ಕಾರ್ಡ್/ ಅಂತ್ಯೋದಯ ಕಾರ್ಡ್ ಮೂಲ ಪ್ರತಿ ಹಾಗೂ 3 ನಕಲು ಪ್ರತಿ. ಫಲಾನುಭವಿಯ ಆಧಾರ ಕಾರ್ಡ್ ಮೂಲ ಪ್ರತಿ ಹಾಗೂ 3 ನಕಲು ಪ್ರತಿ ತರುವಂತೆ ಸೂಚಿಸಲಾಗಿದೆ.