2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಸನ್ಮಾನಕ್ಕೆ ಡಾ.ದಿನಕರ ಕೆಂಜೂರು ಸೇರಿದಂತೆ 43 ಸಾಧಕರು, 7ಸಂಸ್ಥೆಗಳು ಆಯ್ಕೆ
ಉಡುಪಿ, ಅ.31: ಕರಾವಳಿಯ ಮೂಲನಿವಾಸಿ ಬುಡಕಟ್ಟು ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ವಿಕಲಚೇತನರಾದ, ಮಂಗಳೂರು ವಿವಿ ಉಪನ್ಯಾಸಕ ಡಾ.ದಿನಕರ ಕೆಂಜೂರು ಹಾಗೂ ರಂಗ ಕರ್ಮಿ ಬಾಸುಮ ಕೊಡಗು ಸೇರಿದಂತೆ ಒಟ್ಟು 43 ಮಂದಿ ಸಾಧಕರನ್ನು ಹಾಗೂ ಏಳು ಸಂಘಸಂಸ್ಥೆಗಳನ್ನು 2024ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಇಂದು ಸಂಜೆ ಬಿಡುಗಡೆ ಗೊಳಿಸಿದ ಈ ಸಾಲಿನ ರಾಜ್ಯೋತ್ಸವ ಸನ್ಮಾನಿ ತರ ಪಟ್ಟಿ ಕೆಳಗಿನಂತಿದೆ. ನಾಳೆ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾಜ ಸೇವೆ: ಕೊರ್ಗಿ ವಿಠಲ ಶೆಟ್ಟಿ ಕುಂದಾಪುರ, ಕೆ.ತಾರಾನಾಥ ಹೊಳ್ಳ, ಕಾರ್ಕಡ ಬ್ರಹ್ಮಾವರ, ಶೇಖರ ಹೆಜ್ಮಾಡಿ ಹೆಜಮಾಡಿ ಕಾಪು, ಉದಯ ಆರ್.ಆಚಾರ್ ಕುಂದಾಪುರ, ಎಚ್.ಜನಾರ್ದನ್ ನವಗ್ರಾಮ ಹೆಬ್ರಿ, ಉದಯಕುಮಾರ್ ಹಟ್ಟಿಯಂಗಡಿ ಕುಂದಾಪುರ, ಕೆ.ಮಹೇಶ್ ಶೆಣೈ ಕಟಪಾಡಿ ಕಾಪು, ಮಹೇಶ ಪೂಜಾರಿ ಪಡುತೋನ್ಸೆ ಉಡುಪಿ, ಪ್ರದೀಪ್ ಕುಮಾರ್ ಬಸ್ರೂರು ಕುಂದಾಪುರ, ಅಭಿನಂದನ ಎ ಶೆಟ್ಟಿ ಕುಂದಾಪುರ.
ಶಿಕ್ಷಣ: ಡಾ.ದಿನಕರ ಕೆಂಜೂರು, ಕೆಂಜೂರು ಬ್ರಹ್ಮಾವರ.
ಧಾರ್ಮಿಕ ಕ್ಷೇತ್ರ: ಶ್ರೀನಿವಾಸ ತಂತ್ರಿ ಕಾಪು.
ಬಾಲಪ್ರತಿಭೆ: ಸಮೃದ್ಧಿ ಎಸ್.ಮೊಗವೀರ ಬ್ರಹ್ಮಾವರ.
ದೈವಾರಾಧನೆ: ರಾಘು ಪೂಜಾರಿ ಮಣಿಪುರ ಕಾಪು, ಸಂತೋಷ್ ಕುಮಾರ್ ಆರ್ಡಿ ಹೆಬ್ರಿ, ಸಂಜೀವ ಪರವ ಕುಕ್ಕಂದೂರು ಕಾರ್ಕಳ.
ಹೈನುಗಾರಿಕೆ: ಕೆ.ಜಗನ್ನಾಥ ಪೂಜಾರಿ ಹುಣ್ಸೆಮಕ್ಕಿ ಕುಂದಾಪುರ,
ಯಕ್ಷಗಾನ: ಸಂಜೀವ ಶೆಟ್ಟಿ ಬೈಂದೂರು, ಬೇಳೂರು ವಿಷ್ಣುಮೂರ್ತಿ ನಾಯಕ್, ಬೇಳೂರು ಮೊಗಬೆಟ್ಟು ಕುಂದಾಪುರ, ಉದಯಕುಮಾರ್ ಹೊಸಾಳ ಬಾರಕೂರು ಬ್ರಹ್ಮಾವರ, ಪಿ.ವಿ.ಆನಂದ ಸಾಲಿಗ್ರಾಮ ಬ್ರಹ್ಮಾವರ.
ರಂಗಭೂಮಿ: ಬಾಸುಮ ಕೊಡಗು, ಹರೀಶ್ ಶೆಟ್ಟಿ ಕಾರ್ಕಳ, ಹರೀಶ್ ಜೋಡುರಸ್ತೆ ಕಾರ್ಕಳ, ಸದಾಶಿವ ಶೆಟ್ಟಿ ಕಾಬೆಟ್ಟು ಕಾರ್ಕಳ.
ನಾಟಕ: ಜಯಕರ ಮಣಿಪಾಲ, ವಿನೋದ್ ಮಂಚಿ ಮಣಿಪಾಲ.
ಸಂಗೀತ: ಅಶೋಕ್ ಶೇರಿಗಾರ್ (ಸ್ಯಾಕ್ಸೋಫೋನ್) ಉಡುಪಿ, ಸುನಿಲ್ ದೇವಾಡಿಗ (ಸ್ಯಾಕ್ಸೋಫೋನ್) ಸೂಡ ಕಾರ್ಕಳ, ಸಚಿತ್ ಪೂಜಾರಿ ನಂದಳಿಕೆ ಕಾರ್ಕಳ.
ಚಿತ್ರಕಲೆ: ಮಹೇಶ್ ಚಂಡ್ಕಳ ಕೊಡವೂರು ಉಡುಪಿ.
ಸಾಹಿತ್ಯ: ಶಂಕರ್ ಯು.ಮಂಜೇಶ್ವರ ಮಣೂರು ಕೋಟ, ಮುಷ್ತಾಕ್ ಹೆನ್ನಾಬೈಲ್ ಸಿದ್ಧಾಪುರ ಕುಂದಾಪುರ, ಪ್ರದೀಪ್ ಡಿಎಂ ಹಾವಂಜೆ ಬ್ರಹ್ಮಾವರ.
ಶಿಲ್ಪಕಲೆ: ಪ್ರಶಾಂತ್ ಆಚಾರ್ಯ ಬೈಂದೂರು.
ವೈದ್ಯಕೀಯ: ಡಾ.ರಾಜಲಕ್ಷ್ಮೀ ಸಂತೆಕಟ್ಟೆ ಉಡುಪಿ.
ಕ್ರೀಡೆ: ಸುರೇಶ್ ಕೆಳಾರ್ಕಳಬೆಟ್ಟು ಉಡುಪಿ, ರಾಜಶೇಖರ್ ಎ. ಶಾಮರಾವ್ ಹೆರ್ಗ ಉಡುಪಿ, ಗೋವರ್ಧನ ಎನ್.ಬಂಗೇರ ಕಿದಿಯೂರು ಉಡುಪಿ.
ಸಂಕೀರ್ಣ: ಸುಬ್ರಹ್ಮಣ್ಯ ಬೈಪಾಡಿತ್ತಾಯ ಕಾರ್ಕಳ.
ಕೃಷಿ: ಮುಂಬಾರು ದಿನಕರ ಶೆಟ್ಟಿ, ಕಾವ್ರಾಡಿ ಕುಂದಾಪುರ, ಜೋಸೆಫ್ ಲೋಬೊ ಶಂಕರಪುರ ಕಾಪು.
ಪತ್ರಿಕೋದ್ಯಮ: ಚಿತ್ತೂರು ಪ್ರಭಾಕರ ಆಚಾರ್ಯ ಕುಂದಾಪುರ.
ಸಂಘ ಸಂಸ್ಥೆಗಳು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ, ಶಿರ್ವ ಮಹಿಳಾ ಮಂಡಲ ಶಿರ್ವ, ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣಗುಡ್ಡೆ ಉಡುಪಿ, ಯೂತ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಉಡುಪಿ, ಬೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ಬೆಚ್ಚಳ್ಳಿ ಹೊಸಂಗಡಿ ಕುಂದಾಪುರ, ವಿಜಯ ಯುವಕ ಸಂಘ ಹಾಗೂ ಖುಷಿ ಮಹಿಳಾ ಮಂಡಲ ಕಾರ್ಕಳ, ಶ್ರೀಗಜಾನನ ಯಕ್ಷಗಾನ ಕಲಾಸಂಘ ಬಡಾನಿಡಿಯೂರು ಉಡುಪಿ.