ಮಾ.9ಕ್ಕೆ ರಾಜ್ಯ ವಿಜ್ಞಾನ ಪರಿಷತ್ತಿನ ಚುನಾವಣೆ
ಉಡುಪಿ: ರಾಜ್ಯದಲ್ಲಿ ವೈಜ್ಞಾನಿಕ ಮನೋಭಾವ ಜಾಗೃತ ಗೊಳಿಸುವ ಹಾಗೂ ವಿಜ್ಞಾನವನ್ನು ಜನಪ್ರಿಯಗೊಳಿಸಲು ಶ್ರಮಿ ಸುತ್ತಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಆಯ್ಕೆಗಾಗಿ ತ್ರೈವಾರ್ಷಿಕ ಚುನಾವಣೆ ಮಾರ್ಚ್ 9ರಂದು ಆಯಾ ಜಿಲ್ಲಾ ಕೇಂದ್ರ ಹಾಗೂ ೧೫೦ಕ್ಕಿಂತ ಹೆಚ್ಚು ಸದಸ್ಯರಿರುವ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
2025ರ ಜನವರಿ 20ರಿಂದ ಫೆಬ್ರವರಿ 1ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಫೆಬ್ರವರಿ 3ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆಬ್ರವರಿ 10 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮಾರ್ಚ್ 9ರಂದು ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ವೆಬ್ಸೈಟ್ -www.krvp.in-ನ್ನು ಸಂಪರ್ಕಿಸಬಹುದು ಎಂದು ಕ.ರಾ.ವಿ.ಪಿ ಆಡಳಿತಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Next Story