ಉಡುಪಿ ನಗರ ಮಧ್ಯೆ ಅಪಾಯಕಾರಿ ಕೃತಕ ಜಲಾಶಯ
ಉಡುಪಿ, ಜು.30: ನಗರದ ಕವಿ ಮುದ್ದಣ ಮಾರ್ಗದಲ್ಲಿದ್ದ ಹಾಜಿ ಅಬ್ದುಲ್ಲಾ ಸ್ಮಾರಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೆಡವಿ ಹಲವು ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆ ನಿರ್ಮಿಸಲು ತೋಡಿದ್ದ ಹೊಂಡ ಇದೀಗ ಜಲಾಶಯವಾಗಿ ಮಾರ್ಪಟ್ಟಿದೆ.
ಈ ಜಾಗದಲ್ಲಿ ನೆಲ ಅಂತಸ್ತು, ಇರುವ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ನಲವತ್ತುಕ್ಕೂ ಅಧಿಕ ಅಡಿ ಆಳದ ಗುಂಡಿ ತೋಡಿಲಾಗಿದೆ. ಕೆಲವು ವರ್ಷಗಳಿಂದ ಇದರ ಕಾಮಗಾರಿ ಸ್ಥಗಿತಗೊಂಡಿದ್ದು, ಪ್ರತಿ ಮಳೆಗಾಲದಲ್ಲಿ ಈ ಹೊಂಡದಲ್ಲಿ ನೀರು ತುಂಬಿ ಜಲಾಶಯವೇ ಸೃಷ್ಠಿಯಾಗುತ್ತದೆ.
ಇದರಿಂದ ಈ ಹೊಂಡದ ಸುತ್ತಮುತ್ತ ವಸತಿಗೃಹ, ವಾಣಿಜ್ಯ ಕಟ್ಟಡಗಳು ಇವೆ. ಈ ಹೊಂಡದಲ್ಲಿ ಮಣ್ಣು ಕುಸಿತಗೊಂಡರೆ ದೊಡ್ಡ ಮಟ್ಟದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಹಲವು ಮನವಿಗಳನ್ನು ಸಲ್ಲಿಸಿದರೂ ಇದುವರೆಗೂ ಸಮಸ್ಯೆ ಪರಿಹರಿಸುವ ಪ್ರಯತ್ನಗಳು ನಡೆದಿಲ್ಲ. ಹಾಗಾಗಿ ಖುದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಬೇಕು. ಎದುರಾಗಿರುವ ಸಮಸ್ಯೆಯನ್ನು ಪರಿಹರಿಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.