ಉಡುಪಿ ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಜೋಡಣೆ ಅಭಿಯಾನ
ಉಡುಪಿ, ನ.4: ಪಹಣಿಗೆ ಆಧಾರ್ ಜೋಡಣೆ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಇದರಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಖಾತಾದಾರರು ಮರಣ ಹೊಂದಿರುವ ಬಗ್ಗೆ ತಂತ್ರಾಂಶದಲ್ಲಿ ನಮೂದಿಸಿದ್ದು ಇಂತಹ ಪ್ರಕರಣಗಳಲ್ಲಿ ಪೌತಿ/ವಾರೀಸು ಖಾತೆ ಆಂದೋಲನವನ್ನು ಆಯಾಯ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಅವುಗಳ ವಿವರ ಹೀಗಿದೆ.
ಉಡುಪಿ ತಾಲೂಕಿನಲ್ಲಿ ಪೌತಿ ಆಂದೋಲನ ನವೆಂಬರ್ 7, ಕುಂದಾಪುರ ತಾಲೂಕಿನಲ್ಲಿ ಪೌತಿ ಆಂದೋಲನ ನ. 8, ಕಾರ್ಕಳ ತಾಲೂಕಿನಲ್ಲಿ ಪೌತಿ ಆಂದೋಲನ ನ. 11, ಬ್ರಹ್ಮಾವರ ತಾಲೂಕಿನಲ್ಲಿ ಪೌತಿ ಆಂದೋಲನ ನ.12, ಬೈಂದೂರು ತಾಲೂಕಿನಲ್ಲಿ ಪೌತಿ ಆಂದೋಲನ ನ. 13, ಕಾಪು ತಾಲೂಕಿನಲ್ಲಿ ಪೌತಿ ಆಂದೋಲನ ನ.14 ಹಾಗೂ ಹೆಬ್ರಿ ತಾಲೂಕಿನಲ್ಲಿ ಪೌತಿ ಆಂದೋಲನ ನ. 15ರಂದು ನಡೆಯಲಿದೆ.
ಆದ್ದರಿಂದ ಜಿಲ್ಲೆಯಲ್ಲಿ ಪೌತಿ/ವಾರೀಸು ಖಾತೆ ಮಾಡಲು ಬಾಕಿ ಇರುವ ಜಮೀನಿನ ವಾರೀಸುದಾರರು ಆಯಾಯ ತಾಲೂಕು ಕಛೇರಿ ಅಥವಾ ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಿ ಮಾಹಿತಿಯನ್ನು ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಪೌತಿ ಆಂದೋಲನದಲ್ಲಿ ಭಾಗವಹಿಸುವಂತೆ ಹಾಗೂ ಈ ಪೌತಿ ಆಂದೋಲನದಡಿ ಜಮೀನಿನ ದಾಖಲೆಗಳನ್ನು ಪಹಣಿಯಲ್ಲಿ ಇಂಧೀಕರಿಸಲು ಕ್ರಮ ಕೈಗೊಳ್ಳಲಾಗುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.