ಮೂಲನಿವಾಸಿಗಳಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ: ಶ್ಯಾಮರಾಜ್ ಬಿರ್ತಿ ಆರೋಪ
ಬ್ರಹ್ಮಾವರ, ಆ.16: ದಲಿತರಾದ ನಾವು ಈಗ ಪರಕೀಯರ ಆಡಳಿತದಲ್ಲಿ ಇದ್ದೇವೆ. ಕೋಮುವಾದಿ ಶಕ್ತಿಗಳು, ಜಾತಿವಾದಿ ಗಳು ಈಗ ದೇಶವನ್ನಾಳುತ್ತಿ ದ್ದಾರೆ. ಈ ದೇಶದ ಮೂಲನಿವಾಸಿಗಳಾದ ಆದಿದ್ರಾವಿಡರಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ನಾವು ಹಿಂದೂ ಧರ್ಮದ ಜಾತಿ ಎಂಬ ವಿಷವರ್ತುಲದಲ್ಲಿ ಸಿಕ್ಕಿ ನೆಲಕಚ್ಚಿ ಹೋಗಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆರೋಪಿಸಿದ್ದಾರೆ.
ಅಂಬೇಡ್ಕರ್ ಯುವಕ ಮಂಡಳ ತೆಂಕು ಬಿರ್ತಿ, ಆದಿದ್ರಾವಿಡ ಸಹಕಾರಿ ಸಂಘ ನಿಯಮಿತ, ಅಂಬೇಡ್ಕರ್ ವೆಲ್ಫೇರ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ನಡೆದ 78ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಬಿರ್ತಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಕರ್ನಾಟಕ ಬ್ಯಾಂಕ್ ಉದ್ಯೋಗಿ ಬಿರ್ತಿ ಸುರೇಶ ಮುಖ್ಯ ಅತಿಥಿಗಳಾಗಿದ್ದರು. ಯುವಕ ಮಂಡಲದ ಸದಸ್ಯ ರಾದ ಸಂತೋಷ ಬಿರ್ತಿ, ಶಿವಾನಂದ ಬಿರ್ತಿ, ಅನಿಲ ಬಿರ್ತಿ, ಚೈತನ್ಯ ಬಿರ್ತಿ, ಅರುಣ ಪಾಡಿಗಾರ, ಕಿಶನ್ ಕುಮಾರ್ ಬಿರ್ತಿ, ಸ್ವರಾಜ್ ಬಿರ್ತಿ, ಪ್ರಸನ್ನ ಚಾಂತಾರು, ಗೀತಾ ಬಿರ್ತಿ, ಮಮತಾ, ಶ್ವೇತಾ ಬಿರ್ತಿ ಉಪಸ್ಥಿತರಿದ್ದರು.