ಬೆಂಗಳೂರು-ಮುರ್ಡೇಶ್ವರ ರೈಲು ಅವೈಜ್ಞಾನಿಕ ವೇಳಾಪಟ್ಟಿ: ಗಣೇಶ್ ಪುತ್ರನ್ ಆಕ್ರೋಶ
ಸಾಂದರ್ಭಿಕ ಚಿತ್ರ
ಕುಂದಾಪುರ, ಸೆ.20: ಇತ್ತೀಚೆಗೆ ವಿಸ್ತರಣೆಗೊಂಡ ಬೆಂಗಳೂರು-ಮೈಸೂರು- ಮುರುಡೇಶ್ವರ(16585) ಮಂಗಳೂರಿಗೆ 8.15ಕ್ಕೆ ಪ್ರವೇಶಿಸಿ 11ಗಂಟೆಗೆ ಸುರತ್ಕಲ್ ಬರುವ ರೈಲಿನ ಅವೈಜ್ಞಾನಿಕ ವೇಳಾಪಟ್ಟಿ ಬಗ್ಗೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಿಂದ ಸುರತ್ಕಲ್ನ ಬರೇ 20 ಕಿ.ಮಿ ವ್ಯಾಪ್ತಿಯ ಅಂತರಕ್ಕೆ 3.30 ಗಂಟೆ ಅವಧಿ ತೆಗೆದುಕೊಂಡು ಕೇರಳ ಲಾಬಿ ಅಥವಾ ಸ್ಥಾಪಿತ ಹಿತಾಸಕ್ತಿಗೆ ದಕ್ಷಿಣ ರೈಲ್ವೆ ಮಣಿದಿದೆ. ಈ ರೈಲನ್ನು ಸರಿಯಾದ ವೇಳಾಪಟ್ಟಿ ತಯಾರಿಸಿ ಕರ್ನಾಟಕ ಕರಾವಳಿ ಭಾಗದಲ್ಲಿ ಹೊರಡಿಸಿದರೆ ಈ ರೈಲನ್ನು ಗೋಕರ್ಣ, ಕಾರವಾರದ ವರೆಗೂ ವಿಸ್ತರಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಮೈಸೂರು, ಉಡುಪಿ, ಆನೆಗುಡ್ಡೆ, ಹಟ್ಟಿಅಂಗಡಿ ವಿನಾಯಕ, ಕೊಲ್ಲೂರು, ಇಡಗುಂಜಿ, ಗೋಕರ್ಣಕ್ಕೆ ಅನುಕೂಲವಾಗುವ ವೇಳಾಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಉಳಿದ ರೈಲುಗಳ ಸಂಚಾರದ ಅವಧಿ ಯಷ್ಟೇ ಈ ರೈಲಿಗೂ ಅನ್ವಯ ಆಗುವ ವೇಳಾಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.