ಬೆಂಗಳೂರು - ಮುರುಡೇಶ್ವರ ದೈನಂದಿನ ರೈಲಿನ ಸಮಯ ಪರಿಷ್ಕರಣೆ
40 ನಿಮಿಷ ಬೇಗ ಗಮ್ಯಕ್ಕೆ ರವಿವಾರದಿಂದ ಜಾರಿ
ಸಾಂದರ್ಭಿಕ ಚಿತ್ರ
ಉಡುಪಿ, ಸೆ.23: ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಹಾಗೂ ಮುರುಡೇಶ್ವರ ನಡುವೆ ಸಂಚರಿಸುವ ರೈಲು ನಂ. 16585 ದೈನಂದಿನ ಎಕ್ಸ್ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಇದರಿಂದ ರೈಲು ಈಗಿನ ಸಮಯಕ್ಕಿಂತ 40 ನಿಮಿಷ ಬೇಗನೇ ಮುರುಡೇಶ್ವರ ತಲುಪಲಿದೆ.
ಪರಿಷ್ಕರಿತ ಸಮಯ ಸೆ.24 ರವಿವಾರದಿಂದ ಅನುಷ್ಠಾನಗೊಳ್ಳಲಿದೆ. ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ವರೆಗಿನ ಈಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಂಗಳೂರು ಜಂಕ್ಷನ್ಗೆ ಬೆಳಗ್ಗೆ 8:13ಕ್ಕೆ ಆಗಮಿಸಿ 8:15ಕ್ಕೆ ನಿರ್ಗಮಿಸುವ ರೈಲು ಮಂಗಳೂರು ಸೆಂಟ್ರಲ್ಗೆ 8:30ಕ್ಕೆ ಆಗಮಿಸಿ 8:40ಕ್ಕೆ ಮುರುಡೇಶ್ವರದತ್ತ ತೆರಳಲಿದೆ. ಇದೀಗ ನಂತರದ ಪ್ರಯಾಣದಲ್ಲಿ ಸಮಯ ಪರಿಷ್ಕರಣೆಗೊಂಡಿದೆ.
ಸುರತ್ಕಲ್ಗೆ ಮೊದಲು 10:32ಕ್ಕೆ ಬಂದು 10:34ಕ್ಕೆ ಹೊರಡುತಿದ್ದ ರೈಲು ನಾಳೆಯಿಂದ 9:48ಕ್ಕೆ ಬಂದು 9:50ಕ್ಕೆ ನಿರ್ಗಮಿಸಲಿದೆ. ಅದೇ ರೀತಿ ಮುಲ್ಕಿ ನಿಲ್ದಾಣಕ್ಕೆ 10:44/10:46ಕ್ಕೆ ಬದಲು 10:06/10:08, ಉಡುಪಿ 11:18/11:20ಕ್ಕೆ ಬದಲು 10:40/10:42, ಬಾರಕೂರು 11:38/11:40ಕ್ಕೆ ಬದಲು 10:56/10:58, ಕುಂದಾಪುರ 11:54/11:56ಕ್ಕೆ ಬದಲು 11:14/11:16, ಮೂಕಾಂಬಿಕಾ ರೋಡ್ ಬೈಂದೂರು 12:40/12:42ಕ್ಕೆ ಬದಲು 11:40/11:42, ಭಟ್ಕಳ 12:56/12:58ಕ್ಕೆ ಬದಲು 12:00/12:02 ಹಾಗೂ ಮುರುಡೇಶ್ವರ ನಿಲ್ದಾಣವನ್ನು 1:35ಕ್ಕೆ ಬದಲು 12:55ಕ್ಕೆ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.