ಬೆಂಗಳೂರಿನ ರಾಜಭವನ ಚಲೋ: ಪೋಸ್ಟರ್ ಬಿಡುಗಡೆ
ಉಡುಪಿ: ನ.25: ಕಿಸಾನ್ ಸಂಯುಕ್ತ ಮೋರ್ಚಾ(ಎಸ್‌ಕೆಎಂ) ಹಾಗೂ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿ (ಜೆಸಿಟಿಯು)ಯು ಜನತೆಯ 21 ಬೇಡಿಕೆಗಳಿಗಾಗಿ ನ.26-28ವರೆಗೆ ಹಮ್ಮಿಕೊಂಡಿರುವ ಬೆಂಗಳೂರಿನ ರಾಜ ಭವನ ಚಲೋ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಕುಂದಾಪುರದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ಉಡುಪಿ ಜಿಲ್ಲೆಯಿಂದ ಸುಮಾರು 500ಕ್ಕೂ ಕಾರ್ಮಿಕರು ಕೂಲಿಕಾರರು ಈ ಹೋರಾಟದಲ್ಲಿ ಭಾಗವಹಿಸಲು ತೀರ್ಮಾನಿಸಿ ದ್ದಾರೆ. ಕೇಂದ್ರ ಸರ್ಕಾರದ ಖಾಸಗೀಕರಣದ ವಿದ್ಯುತ್ ಕಾಯ್ದೆ -2022 ಮಸೂದೆ ರೈಲ್ವೆ ಖಾಸಗೀಕರಣ ವಿರುದ್ಧ, ಕಾರ್ಮಿಕರ ನೂತನ ಸಂಹಿತೆ ವಾಪಾಸ್ಸಾತಿಗಾಗಿ, ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ವೇತನ 26000ರೂ. ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ, ಅಂಗನವಾಡಿ ನೌಕರರಿಗೆ ಗ್ರಾಚುವಿಟಿ ನೀಡಬೇಕು. ಎಂ.ಎಸ್. ಸ್ವಾಮಿನಾಥನ್ ಶಿಪಾರಸ್ಸು ಜಾರಿ ಮಾಡಬೇಕು, ಕಾರ್ಪೋರೇಟ್ ಪರ ಪಿಎಂ ಫಸಲ್ ಬೀಮಾ ಯೋಜನೆ ರದ್ದು ಮಾಡ ಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಿದ್ದಾರೆ.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ, ಮಂಡಳಿ ನೂರಾರು ಕೋಟಿ ಹಣ ವೈದ್ಯಕೀಯ ತಪಾಸಣೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಕ್ರಮ ಖಂಡಿಸಿ, ವಯೋ ವೃದ್ದರ ಪಿಂಚಣಿ ಅರ್ಜಿಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರ ಹಿಸಿ ನ.29ರಂದು ಹಮ್ಮಿಕೊಳ್ಳಲಾದ ಬೆಂಗಳೂರಿನ ಕಲ್ಯಾಣ ಮಂಡಳಿ ಚಲೋ ಹೋರಾಟದಲ್ಲಿ ಉಡುಪಿ ಜಿಲ್ಲೆಯಿಂದ ನೂರಾರು ಮಂದಿ ಭಾಗವಹಿಸಲಿದ್ದಾರೆ.