ಬೆಳ್ಮಣ್ : ವಿಕಾಸ್ ಭಾರತ ಟ್ರಸ್ಟ್ ವತಿಯಿಂದ ವಿದ್ಯಾಮೃತ ಕಾರ್ಯಕ್ರಮ
ಕಾರ್ಕಳ : ವಿಕಾಸ್ ಭಾರತ ಟ್ರಸ್ಟ್ ಬೆಳ್ಮಣ್ ದಶಮಾನೋತ್ಸವದ ಪ್ರಯುಕ್ತ ವಿದ್ಯಾಮೃತ ಕಾರ್ಯಕ್ರಮ ಬೆಳ್ಮಣ್ ವಿಠೋಭ ಮಂದಿರದಲ್ಲಿ ನಡೆಯಿತು.
ಟ್ರಸ್ಟಿನ ಗೌರವಾಧ್ಯಕ್ಷ ಸುಹಾಸ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕೆಲಸ ಪೋಷಕರು ಮಾಡಬೇಕು. ದೇವರ ಆಶೀರ್ವಾದ ಹೆತ್ತವರ ಮೇಲೆ ಗೌರವ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ .ಶಿಕ್ಷಣ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ಕಲಿತ ಶಿಕ್ಷಣದಿಂದ ಸಮಾಜಕ್ಕೆ ನಾವೇನು ನೀಡಿದ್ದೇವೆ ಅನ್ನುವುದು ಮುಖ್ಯ ಎಂದರು.
ಸಂವೇದನ ಪೌಂಡೇಶನ್ ಸಂಸ್ಥಾಪಕ, ಅಂಕಣಕಾರ ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಟ್ರಸ್ಟಿನ ಅಧ್ಯಕ್ಷ ಪ್ರದೀಪ್ ಶೆಟ್ಟಿ,ಗೌರವ ಸಲಹೆಗಾರ ಚಂದ್ರಹಾಸ್ ಶೆಟ್ಟಿ ಉಪಸ್ಥಿತರಿದ್ದರು. 125 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪಿ ಎಚ್ ಡಿ ಪದವಿ ಪಡೆದ ಡಾ. ಸೌರಭ್ ತಂತ್ರಿ, ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಯಶಸ್ವಿ ಶೆಟ್ಟಿ ,ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತ್ವಿ ಜೆ.ಪೂಜಾರಿ ,ಅಂತರಾಷ್ಟ್ರೀಯ ಕ್ರೀಡಾಪಟು ಬೋಳ ಅಕ್ಷತಾ ಪೂಜಾರಿ, ಯೋಗ ಪಟು ಉದ್ಭವ್ ದೇವಾಡಿಗರವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ಪ್ರದೀಪ್ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ವೀರೇಂದ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಸದಸ್ಯ ವಕೀಲ ಸರ್ವಜ್ಞ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.