ಆನ್‌ಲೈನ್ ವಂಚನೆ ಬಗ್ಗೆ ಎಚ್ಚರದಿಂದಿರಿ; ನಿವೃತ್ತ ನೌಕರರಿಗೆ ಕಿವಿಮಾತು
ಉಡುಪಿ : ಪಿಂಚಣಿದಾರರು, ಕುಟುಂಬ ನಿವೃತ್ತಿ ವೇತನದಾರರು ಜೀವಂತ ಪ್ರಮಾಣಿಪತ್ರ ಸಲ್ಲಿಸುವ ಕಾಲಾವಧಿ ಈಗಾ ಗಲೇ ಪ್ರಾರಂಭ ವಾಗಿದೆ. ನಿವೃತ್ತರು ಆಧಾರ ಚೀಟಿಯೊಂದಿಗೆ ಹೆಬ್ಬೆಟ್ಟು ಒತ್ತಿ ಜೀವಂತ ಪ್ರಮಾಣಪತ್ರ ಸಲ್ಲಿಸಬೇಕು. ಈಸಂದರ್ಭದಲ್ಲಿ ಆನ್‌ಲೈನ್ ಮೂಲಕ ನಡೆಯುವ ವಂಚನೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಬಾರತೀಯ ಸ್ಟೇಟ್ ಬ್ಯಾಂಕಿನ ಅಧಿಕಾರಿಗಳ ನಿವೃತ್ತ ನೌಕರರಿಗೆ ಕಿವಿಮಾತು ಹೇಳಿದ್ದಾರೆ.
ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಪ್ರಾಂತೀಯ ಕಚೇರಿಯಲ್ಲಿ ಖಜಾನೆ ಶಾಖೆಯ ಉಪಪ್ರಬಂಧಕಿ ದೀಪ್ತಿ ಬಿ. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಸಿದ ಮಾಹಿತಿ ಕಾರ್ಯಕ್ರಮದಲ್ಲಿ ಈ ಸೂಚನೆಗಳನ್ನು ನೀಡಲಾಯಿತು.
ಈ ಪ್ರಕ್ರಿಯೆಯ ಸೂಚನಾ ಅವಧಿ ಮುಗಿಯುತ್ತಲೇ ವಿಳಂಬ ಮಾಡದೆ ಪ್ರಕ್ರಿಯೆಗೆ ತಡೆ ಹಾಕಬೇಕು. ಇತ್ತೀಚೆಗೆ ಆಸ್ತಿ ನೋಂದಣಾಧಿಕಾರಿಯವರ ಕಚೇರಿಗಳಲ್ಲಿ ನೋಂದಾಯಿಸಿದ ನಂತರ ನೋಂದಾವಣೆಯಲ್ಲಿ ಪಾಲು ಗೊಂಡವರ ಖಾತೆಯಿಂದ ನೂತನ ತಾಂತ್ರಿಕ ಅವಿಷ್ಕಾರವನ್ನು ದುರುಪಯೋಗಿಸಿಕೊಂಡು ಬೇರೆಯವರು ಹೆಚ್ಚಿನ ಮೊತ್ತವನ್ನು ಸಂಬಂಧಿತರ ಖಾತೆಯಿಂದ ಲಪಟಾಯಿಸಿದ ಪ್ರಕರಣಗಳು ನಡೆದಿರುವುದರತ್ತ ಅವರು ಗಮನ ಸೆಳೆದರು.
ಇಂತಹ ಘಟನಗಳಿಗೆ ಅವಕಾಶ ನೀಡದಂತೆ ನಿವೃತ್ತರು ಜಾಗ್ರತರಾಗಿರ ಬೇಕು ಎಂಬ ಎಚ್ಚರಿಕೆಯ ಕಿವಿಮಾತುಗಳನ್ನು ಎಸ್‌ಬಿಐನ ಪ್ರಾಂತೀಯ ಕಚೇರಿಯ ಪ್ರಬಂಧಕ ಶಾಂತಕುಮಾರ್, ಖಜಾನೆ ಶಾಖೆಯ ಸಹವರ್ತಿ ಕೃಷ್ಣ ಪೂಜಾರಿ ಹೇಳಿದರು.
ಪ್ರಾಂತೀಯ ಕಚೇರಿಯ ಸಾಲ ವಿಭಾಗದ ಮುಖ್ಯಪ್ರಬಂಧಕಿ ಸುಧಾ ಪ್ರಿಯದರ್ಶನಿ ಸಾಲ ಸೌಲಭ್ಯದ ಬಗ್ಗೆ ವಿವರ ನೀಡಿದರು. ನಿವೃತ್ತಿ ವೇತನದಾರರಾದ ಎನ್. ನಿತ್ಯಾನಂದ, ವಿ.ಎನ್. ಪುರಾಣಿಕ, ಎಸ್.ಎಸ್. ತೋನ್ಸೆ ಮೊದಲಾದವರು ಅನಿಸಿಕೆ ವೈಕ್ತಪಡಿಸಿದರು.
ಹಿರಿಯ ಸಹವರ್ತಿ ಚೈತ್ರಾ ಸ್ವಾಗತಿಸಿ ವಂದಿಸಿದರು.