ಬೈಂದೂರು: ಮೀನುಗಾರಿಕೆ ವೇಳೆ ಇಬ್ಬರು ಮೀನುಗಾರರು ಸಮುದ್ರಪಾಲು
ಬೈಂದೂರು, ಆ.27: ಮೀನುಗಾರಿಕೆ ವೇಳೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿರುವ ಘಟನೆ ಶಿರೂರು ಅಳ್ವೆಗದ್ದೆ ಎಂಬಲ್ಲಿ ರವಿವಾರ ಸಂಜೆ ವೇಳೆ ನಡೆದಿದೆ.
ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಮುಸಾಬ್ (22) ಹಾಗೂ ನಝಾನ್(24) ಸಮುದ್ರ ಪಾಲಾಗಿರುವ ಯುವಕರು. ಒಟ್ಟು ನಾಲ್ಕು ಮಂದಿ ಮೀನುಗಾರಿಕೆಗೆ ತೆರಳಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿರುವ ಪರಿಣಾಮ ಇವರ ಪೈಕಿ ಇಬ್ಬರು ಆಯತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ಕೂಡಲೇ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸ್ಥಳಕ್ಕೆ ಬೈಂದೂರು ಎಸ್ಸೈ ನಿರಂಜನ ಗೌಡ, ಅಗ್ನಿಶಾಮಕದಳ, ಕರಾವಳಿ ಕಾವಲು ಪೊಲೀಸರು, ತಹಶೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Next Story