ಗಂಗೊಳ್ಳಿ ದೋಣಿ ದುರಂತ ಸಮಗ್ರ ತನಿಖೆಗೆ ಸಿಐಟಿಯು ಆಗ್ರಹ
ಉಡುಪಿ, ನ.13: ಗಂಗೊಳ್ಳಿ ಬಂದರಿನ ಮ್ಯಾಗನೀಸ್ ರಸ್ತೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 11ಮೀನುಗಾರಿಕಾ ಬೋಟ್, ಕಾರ್ಮಿಕರ ದ್ವಿಚಕ್ರ ವಾಹನಗಳು ಮತ್ತು ಮೀನುಗಾರಿಕೆಯ ಬಲೆಗಳು ಸೇರಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದ್ದು ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಬೋಟ್ ಮಾಲೀಕರಿಗೆ ಮತ್ತು ಕಾರ್ಮಿಕರ ದ್ವಿಚಕ್ರ ವಾಹನಕ್ಕೆ ಸರಿಯಾದ ಪರಿಹಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್. ಒತ್ತಾಯಿಸಿದ್ದಾರೆ
11ಬೋಟ್‌ಗಳಲ್ಲಿ ನೂರಾರು ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿರುವ ಕಾರ್ಮಿಕರು ಇಂದು ಅತಂತ್ರರಾಗಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇರಬೇಕಾದ ಕಾರ್ಮಿಕರು ಹಾಗೂ ಮಾಲಿಕರ ಮನೆಯಲ್ಲಿ ದುಃಖವನ್ನು ಅನುಭವಿಸು ವಂತಾಗಿದೆ. ಆದ್ದರಿಂದ ಈ ಕೂಡಲೇ ಪೋಲಿಸ್ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ತನಿಖೆಗೆ ಒಳಪಡಿಸಿ ಬೋಟ್ ಮಾಲಕರಿಗೆ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಿ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.