ಹಿಂದುಳಿದ ವರ್ಗಗಳ ಪಟ್ಟಿಯಿಂದ ‘ಮೊಗೇರ’ ಕೈಬಿಡುವುದಕ್ಕೆ ದಸಂಸ ಆಕ್ಷೇಪ
ಉಡುಪಿ: ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿನ ಮೊಗೇರ ಜಾತಿಯ ಹೆಸರನ್ನು ತೆಗೆದು ಹಾಕುವುದಕ್ಕೆ ಆಕ್ಷೇಪ ವ್ಯಕ್ತಪ ಡಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ, ಈ ಪಟ್ಟಿಯಿಂದ ಕೈಬಿಟ್ಟರೆ ಮೊಗೇರರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಕೊಂಡು ಎಸ್‌ಸಿ ಪ್ರಮಾಣ ಪತ್ರ ಪಡೆದುಕೊಳ್ಳಲಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯವರಿಗೆ ಬಹಳ ದೊಡ್ಡ ಮೋಸವಾಗುತ್ತದೆಂದು ಆರೋಪಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ್ ಗಿಳಿಯಾರು, ಮೊಗೇರ್ ಜಾತಿಯು ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಹಿಂದು ಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗ ಕ್ರಮ ಸಂಖ್ಯೆ(ಎಇ)ರಲ್ಲಿ ಮೊಗೇರ್ ಜಾತಿಯನ್ನು ತೆಗೆದು ಹಾಕುವ ಬಗ್ಗೆ ಆಕ್ಷೇಪಣೆ ಸಲ್ಲಿ ಸಲು ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಾನೂನು ಬಾಹಿರವಾಗಿದೆ ಎಂದು ದೂರಿದರು.
ಉತ್ತರ ಕನ್ನಡ ಜಿಲ್ಲೆಯ ಮೊಗೇರ(ಮೊಗವೀರ)ರು ವೃತ್ತಿಯಲ್ಲಿ ಮೀನುಗಾರ ರಾಗಿದ್ದು, ಸಮಾಜದಲ್ಲಿ ಎಂದೂ ಅಸ್ಪಶ್ಯತೆಯ ನೋವನ್ನು ಅನುಭವಿಸಿಲ್ಲ. ಅಲ್ಲದೇ ಅಂದಿನ ಸಮಾಜ ಅವರನ್ನು ಎಂದೂ ಅಸ್ಪಶ್ಯರನ್ನಾಗಿ ನೋಡಿಲ್ಲ. ಬಾಂಬೆ ಪ್ರಾಂತ್ಯ ದಲ್ಲಿ ಇವರನ್ನು ಅನುಸೂಚಿತ ಜಾತಿ ಎಂಬುದಾಗಿ ನಮೂದಿಸಿರಿ ವುದಿಲ್ಲ ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗ ಕ್ರಮ ಸಂಖ್ಯೆ(ಎಇ)ರಲ್ಲಿ ಹೆಸರಿಸಿರುವ ಮೊಗೇರರು ಮತ್ತು ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿ ಕ್ರಮ ಸಂಖ್ಯೆ 78 ಪಟ್ಟಿಯಲ್ಲಿರುವ ಮೊಗೇರರು ಬೇರೆ ಬೇರೆ ಎಂಬುದು ಹಲವಾರು ದಾಖಲೆಗಳಿಂದ ಮತ್ತು ಪ್ರೊ.ಎಚ್.ಕೆ.ಭಟ್ ಸರಕಾರಕ್ಕೆ ನೀಡಿರುವ ವರದಿಯಿಂದ ಸಾಬೀತಾಗಿದೆ. ಆದುದರಿಂದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇತರೆ ಮೀನುಗಾರ ವೃತ್ತಿಯ ಜಾತಿಗಳೊಂದಿಗೆ ಸೂಚಿತವಾದ ಮೊಗೇರರನ್ನು ಹಿಂದುಳಿದ ವರ್ಗದ ಪಟ್ಟಿ ಯಿಂದ ತೆಗೆದು ಹಾಕಬಾರದು ಎಂದು ಅವರು ಒತ್ತಾಯಿಸಿದರು.
ಬಳಿಕ ಈ ಕುರಿತ ಆಕ್ಷೇಪಣೆಯನ್ನು ದಸಂಸ ನಿಯೋಗ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮೂಲಕ ಆಯೋಗಕ್ಕೆ ಸಲ್ಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ವಿಶ್ವನಾಥ ಬೆಳ್ಳಂಪಳ್ಳಿ, ಆನಂದ ಬ್ರಹ್ಮಾವರ, ಜಿಲ್ಲಾ ಸಂಘಟನಾ ಸಂಚಾಲಕ ವಾಸುವೇದ ಮುದೂರು ಉಪಸ್ಥಿತರಿದ್ದರು.
‘ಮೊಗೇರ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಡುವುದುರ ಹಿಂದೆ ದಲಿತರಿಗೆ ಮೀಸಲಿರಿಸಿದ ನಿಧಿ, ವಿವಿಧ ಸೌಲಭ್ಯ ಹಾಗೂ ಮೀಸಲಾತಿ ಯನ್ನು ಪಡೆಯುವ ಹುನ್ನಾರ ಅಡಗಿದೆ. ಹಿಂದಿನ ಸರಕಾರ ನೇಮಕ ಮಾಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮುತುವರ್ಜಿ ವಹಿಸಿ ಈ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪ್ರವರ್ಗ-1ರಲ್ಲಿರುವ ಮೊಗೇರ್ ಜಾತಿಯನ್ನು ಜಾತಿ ಪಟ್ಟಿಯಿಂದ ಕೈಬಿಡಬಾರದು. ಇದರಿಂದ ದಲಿತರಿಗೆ ಬಹಳ ದೊಡ್ಡ ಮೋಸ ಆಗುತ್ತದೆ. ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ’
-ಸುಂದರ್ ಮಾಸ್ತರ್, ಜಿಲ್ಲಾ ಸಂಚಾಲಕರು, ದಸಂಸ