ಬ್ರಹ್ಮಾವರಕ್ಕೆ ಕೃಷಿ ಕಾಲೇಜು ಮಂಜೂರಾತಿಗೆ ಆಗ್ರಹ
ಉಡುಪಿ, ಅ.1: ಬ್ರಹ್ಮಾವರದ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೃಷಿ ಕಾಲೇಜೊಂದನ್ನು ಪ್ರಾರಂಭಿಸು ವಂತೆ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿಯ ಪ್ರಮೋದ್ ಮಂದಾರ್ತಿ ಶನಿವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಂಶೋಧನಾ ಕೇಂದ್ರವು 350 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ನ್ನೊಳಗೊಂಡ ಕರಾವಳಿ ವಲಯದಲ್ಲಿ ಯಾವುದೇ ಕೃಷಿ ಹಾಗೂ ತೋಟಗಾರಿಕಾ ಕಾಲೇಜು ಇಲ್ಲ. ಹೀಗಾಗಿ ಇಲ್ಲಿ ಕೃಷಿ ಕಾಲೇಜೊಂದನ್ನು ಪ್ರಾರಂಭಿಸಬೇಕೆಂದು ಸಮಿತಿ ಕಳೆದ 10-13 ವರ್ಷಗಳಿಂದ ಹೋರಾಟ ನಡೆಸುತ್ತಿದೆ ಎಂದರು.
ಬಹುದಿನಗಳ ಬೇಡಿಕೆಯಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಗಳಾಗಿದ್ದಾಗ 2010ರಲ್ಲಿ ಕೃಷಿ ಕಾಲೇಜನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರೂ, ತಾಂತ್ರಿಕ ಕಾರಣದಿಂದ ಅದು ಕಾರ್ಯರೂಪಕ್ಕೆ ಬರದೇ, ಕೃಷಿ ಡಿಪ್ಲೋಮ ಕಾಲೇಜನ್ನು ಪ್ರಾರಂಭಿಸಲಾಯಿತು. ಈವರ್ಷದಿಂದ ಡಿಪ್ಲೋಮ ತರಗತಿಗೂ ಪ್ರವೇಶವನ್ನು ರದ್ದುಪಡಿಸಲಾಗಿದೆ ಎಂದರು.
ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಪೂರಕವಾದ ಎಲ್ಲಾ ಸೌಲಭ್ಯಗಳೂ ಲಭ್ಯವಿದೆ.ಕೃಷಿ ಮತ್ತು ತೋಟಗಾರಿಕಾ ಕೇಂದ್ರ 350 ಎಕರೆ ವಿಸ್ತೀರ್ಣವನ್ನುದಲ್ಲಿ ಸುಸಜ್ಜಿತವಾದ ಕಾಲೇಜು ಕಟ್ಟಡವಿದೆ. ಅಲ್ಲದೇ ಇಲ್ಲಿ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ, ಆಧುನಿಕ ಪ್ರಯೋಗಾಲಯ, ಗ್ರಂಥಾಲಯ, ಗಣಕ ಯಂತ್ರ ಪ್ರಯೋಗಾಲಯ, ಕ್ರೀಡಾಂಗಣ, ಪ್ರಾಯೋ ಗಿಕ ಕೃಷಿಗೆ ಬೇಕಾದ ಜಾಗ ಎಲ್ಲವೂ ಇಲ್ಲಿ ಲಭ್ಯವಿದೆ. ಡಿಪ್ಲೋಮಾ ಕಾಲೇಜಿನ ಈ ಎಲ್ಲಾ ಸೌಲಭ್ಯಗಳಿಂದ ಕೃಷಿ ಸಂಬಂ ಧಿತ ಬಿಎಸ್ಸಿ ಕೋರ್ಸಿನ ಕಾಲೇಜನ್ನು ತಕ್ಷಣ ಪ್ರಾರಂಭಿಸಬಹುದಾಗಿದೆ ಎಂದು ಪ್ರಮೋದ್ ಮಂದಾರ್ತಿ ತಿಳಿಸಿದರು.
ಈ ಬಗ್ಗೆ ಜಿಲ್ಲೆಯ ಎಲ್ಲಾ ಐವರು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸತ್ ಸದಸ್ಯೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಶಿವಮೊಗ್ಗ ಕೃಷಿ ಮತ್ತು ತೋಟ ಗಾರಿಕಾ ವಿವಿಯ ಕುಲಪತಿಗಳಿಗೆ ಮನವಿ ಸಲ್ಲಿಸಿ ಕಾಲೇಜು ಮಂಜೂರಾತಿಗೆ ಕೋರಲಾಗಿದೆ ಎಂದರು.
ಹಿಂದಿನ ಸರಕಾರ ಮೊದಲ ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಪ್ರವೇಶವನ್ನು ರದ್ದುಪಡಿಸಿದೆ. ಇದರಿಂದ ಕೃಷಿ ಅಧ್ಯಯನ ಬಯಸುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಸರಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿಗೆ ಕೃಷಿ ಕಾಲೇಜನ್ನು ಮಂಜೂರು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರ ಎಚ್.ಆರ್.ಹೇರೂರು, ಅಜಿತ್ ಗೋಳಿಕಟ್ಟೆ, ಪ್ರವೀಣ್ ಯಕ್ಷಿಮಠ, ಗುರುರಾಜ್ ಕಾರ್ತಿಬೈಲು ಉಪಸ್ಥಿತ ರಿದ್ದರು.