ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ: ತಾಲೂಕು ಕಚೇರಿ ಸಹಿತ ಗ್ರಾಪಂಗಳ ಕಚೇರಿ ಎದುರು ಧರಣಿ
ಕುಂದಾಪುರ, ಆ.21: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಬಿಡುಗಡೆ, ಪಿಂಚಣಿ ಸಮಸ್ಯೆ ಬಗೆಹರಿಸಲು ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕ ಸಂಘಟನೆಗಳಿಂದ ಕುಂದಾಪುರ ತಾಲೂಕು ಕಚೇರಿ ಸಹಿತ ವಿವಿಧ ಗ್ರಾಪಂ ಎದುರು ಇಂದು ಧರಣಿ ಹಮ್ಮಿ ಕೊಳ್ಳಲಾಗಿತ್ತು.
ಕುಂದಾಪುರ ಮಿನಿವಿಧಾನಸೌಧದ ಎದುರು ಪುರಸಭಾ ವ್ಯಾಪ್ತಿಯ ಕಟ್ಟಡ ಕಾರ್ಮಿಕರು ಆಯೋಜಿಸಿದ್ದ ಧರಣಿಯನ್ನು ದ್ದೇಶಿಸಿ ಸಿಐಟಿಯು ಮುಖಂಡ ಎಚ್.ನರಸಿಂಹ ಮಾತನಾಡಿ, ಬಿಜೆಪಿ ಸರಕಾರ ಕಿಟ್ ಖರೀದಿಗೆ ಮಂಡಳಿ ಸಾವಿರಾರು ಕೋಟಿ ಖರ್ಚಾಗಿ ಶೈಕ್ಷಣಿಕ ಧನಸಹಾಯ ಬಿಡುಗಡೆ ಹಣ ಇಲ್ಲದಂತಾಗಿದೆ. ಕಟ್ಟಡ ಸೆಸ್ ಸಂಗ್ರಹ ಸರಿಯಾಗಿ ಸಂಗ್ರಹ ಮಾಡಲು ಮುಂದಾಗುತ್ತಿಲ್ಲ. ಖರೀದಿ ಪಾರದರ್ಶಕವಾಗಿಲ್ಲ ಇದರ ವಿರುದ್ಧ ಸರಕಾರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ವಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ, ಮುಖಂಡರಾದ ಮಹಾಬಲ ವಡೇರಹೋಬಳಿ, ಸುಧೀರ್, ರಾಘವೇಂದ್ರ, ಸಂತೋಷ ಡಿ., ರಾಜ ಬಿಟಿಆರ್, ಸಂಪತ್, ನರಸಿಂಹ ಬದಿಮನೆ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಮಟ್ಟದ ಧರಣಿ: ಅಂಪಾರು ಗ್ರಾಮ ಘಟಕದಿಂದ ಅಂಪಾರು ಗ್ರಾಪಂ ಎದುರುಗಡೆ ಧರಣಿ ನಡೆಸಿ ಮನವಿ ನೀಡಲಾ ಯಿತು. ಘಟಕದ ಮುಖಂಡ ರಾದ ಚಂದ್ರ ಕುಲಾಲ್, ರಾಮ, ಸುಧಾಕರ ಮೊದಲಾದವರಿದ್ದರು.
ಕಾಳಾವರ ಗ್ರಾಪಂ ಎದುರುಗಡೆ ಬೆಳಿಗ್ಗೆ ಕಟ್ಟಡ ಕಾರ್ಮಿಕರ ಧರಣಿ ನಡೆಸಿ ಮನವಿ ಸಲ್ಲಿಸಿದರು. ಘಟಕ ಮುಖಂಡರಾದ ರಾಮಚಂದ್ರ ನಾವಡ, ಪ್ರಶಾಂತ್, ನಾಗೇಶ್ ಕುಲಾಲ್ ಇದ್ದರು. ಮೊವಾಡಿ ಗ್ರಾಮ ಘಟಕದಿಂದ ತ್ರಾಸಿ ಪಂಚಾಯತ್ ಎದುರುಗಡೆ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು. ಘಟಕದ ಮುಂಡರಾದ ಚಿದಂಬರ,ಸರೋಜ, ಗುಲಾಬಿ ಮೊದಲಾದವರಿದ್ದರು.
ಕೋಟೇಶ್ವರ ಗ್ರಾಪಂ ಎದುರುಗಡೆ ನಡೆದ ಕಟ್ಟಡ ಕಾರ್ಮಿಕರ ಧರಣಿಯಲ್ಲಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ, ನಾಗೇಶ್, ಸುಬ್ರಹ್ಮಣ್ಯ, ನಾಗರಾಜ ಹಾಜರಿದ್ದರು. ಹೆಮ್ಮಾಡಿ ಗ್ರಾಪಂ ಎದುರುಗಡೆ ನಡೆದ ಧರಣಿಯಲ್ಲಿ ತಾಲೂಕು ಪ್ರಧಾನ ಕಾರ್ಯ ದರ್ಶಿ ಸಂತೋಷ್ ಹೆಮ್ಮಾಡಿ, ನರಸಿಂಹ ಹೆಮ್ಮಾಡಿ, ಜಗದೀಶ್ ಆಚಾರ್, ಗಣೇಶ್ ಆಚಾರ್ ಮೊದಲಾದವರಿದ್ದರು. ಬಳಿಕ ಮನವಿ ಸಲ್ಲಿಸಲಾಯಿತು.
ಅದೇ ರೀತಿ ಬಸ್ರೂರು, ತಲ್ಲೂರು, ಕರ್ಕುಂಜೆ, ಹಾರ್ದಳ್ಳಿ -ಮಂಡಳ್ಳಿ, ಶಂಕರನಾರಾಯಣ, ಕಾವ್ರಾಡಿ, ವಂಡ್ಸೆ, ಹಂಗಳೂರು, ಗುಲ್ವಾಡಿ, ಆಲೂರು, ಹಕ್ಲಾಡಿ ಹಾಗೂ ಹಾಲಾಡಿ ಗ್ರಾಪಂ ಎದುರು ಆಯಾ ಘಟಕದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಧರಣಿ ನಡೆಸಿ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿದರು. ಬಳಿಕ ಗ್ರಾಪಂ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.