ಸರಕಾರಿ ಬಸ್ ಓಡಿಸುವಂತೆ ಆಲೂರು ವಿದ್ಯಾರ್ಥಿಗಳಿಂದ ಧರಣಿ
ಕುಂದಾಪುರ, ಆ.5: ಕೊಲ್ಲೂರು-ಆಲೂರು-ಕುಂದಾಪುರ ಮಾರ್ಗವಾಗಿ ಸರಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಆಲೂರು ಗ್ರಾಮದ ವಿದ್ಯಾರ್ಥಿಗಳು ಇಂದು ಧರಣಿ ನಡೆಸಿದರು.
ಇಲ್ಲಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸುಮಾರು 22 ಕಿಮೀ ದೂರದಲ್ಲಿರುವ ಕುಂದಾಪುರಕ್ಕೆ ದಿನನಿತ್ಯ ಪ್ರಯಾಣಿಸು ತ್ತಿದ್ದಾರೆ. ಕೆಲವೇ ಕೆಲವು ಖಾಸಗಿ ಬಸ್ಸುಗಳಿದ್ದರೂ ಕಾಲೇಜು ಬಿಡುವ ಸಮಯದಲ್ಲಿ ತುಂಬಿ ಹೋಗಿರು ವುದರಿಂದ ಸಂಜೆ ಬಸ್ ತಪ್ಪಿದ್ದಲ್ಲಿ ವಿದ್ಯಾರ್ಥಿಗಳು ಮನೆಗೆ ಬರುವಾಗ ರಾತ್ರಿ ಆಗುತ್ತದೆ. ಇದರಿಂದ ಮನೆಯ ಪೋಷಕರು ಭಯದಿಂದ ಬದುಕುವಂತಾಗಿದೆ.
ಆದುದರಿಂದ ಸರಕಾರಿ ಬಸ್ಸಿಗೆ ಕೊಲ್ಲೂರು-ಆಲೂರು-ಕುಂದಾಪುರ ಸಂಪರ್ಕಿ ಸುವ ರೂಟ್ ಪರವಾನಿಗೆ ನೀಡಿ ಬಸ್ ಓಡಿ ಸಲು ಜಿಲ್ಲಾ ಸಾರಿಗೆ ಪ್ರಾಧಿಕಾರ ಮುಂದಾಗಬೇಕು. ಅಲ್ಲದೇ ಆಲೂರಿಗೆ ಸರಕಾರಿ ಕಾಲೇಜು ಮಂಜೂರು ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಧರಣಿಯಲ್ಲಿ ವಿದ್ಯಾರ್ಥಿಗಳಾದ ಆದರ್ಶ, ಪೂರ್ಣೇಶ, ಸುರಕ್ಷಾ, ಸಾನ್ವಿ, ಸಾಕ್ಷಿ, ಶ್ರಾವ್ಯ, ದೀಕ್ಷಾ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಚಂದ್ರಶೇಖರ ವಿ., ರವಿ ವಿ.ಎಂ., ಆಲೂರು ಘಟಕದ ಅಧ್ಯಕ್ಷ ರಘುರಾಮ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.