ಊದ್ಯೋಗ ಖಾತ್ರಿ ಕೂಲಿಕಾರರ ಬೇಡಿಕೆಗಾಗಿ ಧರಣಿ
ಕುಂದಾಪುರ, ಅ.14: ಉದ್ಯೋಗ ಖಾತರಿ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಕರೆಯಂತೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುಜ್ಜಾಡಿ ಗ್ರಾಪಂ ಕಚೇರಿ ಎದುರು ಇಂದು ಧರಣಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ರಾಜ್ಯ ಸಮಿತಿ ಸದಸ್ಯರಾದ ನಾಗರತ್ನ ನಾಡ, ಶ್ಯಾಮಲ ಗುಜ್ಜಾಡಿ, ಗಿರಿಜ ಮೊದಲದಾವರು ಉಪಸ್ಥಿತರಿದ್ದರು.
ಕಂಭದಕೋಣೆಯಲ್ಲಿ ಧರಣಿ: ಬೈಂದೂರು ತಾಲೂಕು ಕಂಭದಕೋಣೆ ಗ್ರಾಮ ಪಂಚಾಯತ್ ಕಚೇರಿ ಎದುರು ಕೃಷಿ ಕೂಲಿಕಾರರ ಧರಣಿ ನಡೆಸಲಾಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಅರ್ಪಿಸಲಾಯಿತು. ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸ್ಥಳೀಯ ಮುಖಂಡರಾದ ಅನುಷ, ದಾರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.