ಡಾ.ನಮೀತಾ ಪಾಯಸ್‌ಗೆ ಅಮೆರಿಕಾದ ಡಾಕ್ಟರೇಟ್
ಕುಂದಾಪುರ, ಜು.26: ಕುಂದಾಪುರ ಮೂಲದ ಡಾ.ನಮೀತಾ ವಿಯೊನ್ನಾ ಪಾಯಸ್, ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ‘ಮೊಡಲಿಂಗ್ ಆಫ್ ಕ್ರಾಸ್ ಸೆಕ್ಷನಲ್, ರೀಪಿಟೇಡ್ ಮೇಸರ್ಸ್ ಮತ್ತು ಟೈಮ್ ಸೀರಿಸ್ ಡಾಟಾ ಸ್ಟ್ರಚರ್ಸ್’ ಕುರಿತ ಸಂಶೋಧನಾ ಪ್ರಬಂಧಕ್ಕೆ ಅಮೆರಿಕಾದ ಕನೆಕ್ಟಿಕಟ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ.
ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಸಂಗುತ್ತೇವಾರ್ ರಾಜೇಶೇಖರನ್ ಡಾ.ನಳೀನಿ ರವಿಶಂಕರ ಅವರ ಮಾರ್ಗ ದರ್ಶನ ಪಡೆದುಕೊಂಡಿರುವ ನಮೀತಾ, ಕುಂದಾಪುರದ ಹಿರಿಯ ಪತ್ರಕರ್ತ, ಉದ್ಯಮಿ ವಿನಯ್ ಎ.ಪಾಯಸ್ ಹಾಗೂ ಜಸಿಂತಾ ವಿ.ಪಾಯಸ್ ದಂಪತಿ ಪುತ್ರಿ. ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜ್ ಹಾಗೂ ಪೂನಾದ ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿನಿಯಾಗಿದ್ದಾರೆ.
Next Story