ರಾಜಸ್ಥಾನ್ ಆರ್ಟ್, ಕ್ರಾಫ್ಟ್ ಮೇಳಕ್ಕೆ ಚಾಲನೆ
ಉಡುಪಿ, ಸೆ.29: ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ವತಿಯಿಂದ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಹಮ್ಮಿಕೊ ಳ್ಳಲಾದ ವಿವಿಧ ಕರಕುಶಲ ವಸ್ತುಗಳ, ಕೈಮಗ್ಗ ಸೀರೆಗಳ, ಆಭರಣಗಳು ಮತ್ತು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ರಾಜಸ್ಥಾನ ಮೇಳ’ವನ್ನು ಉದ್ಯಮಿ ದಿನೇಶ್ ಕಿಣಿ ಅಲೆವೂರು ಶುಕ್ರವಾರ ಉದ್ಘಾಟಿಸಿದರು.
ಮೇಳದಲ್ಲಿ ರಾಜಸ್ಥಾನ, ಕಾಶ್ಮೀರ, ಕರ್ನಾಟಕ, ಬಿಹಾರ್ ಸೇರಿದಂತೆ ದೇಶದ 15 ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು ಲಭ್ಯವಿದೆ.
ಅಲ್ಲದೆ ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದರಬಾದ್ ಕಪ್ಪುಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್‌ಗಳು ಇಲ್ಲಿವೆ ಎಂದು ಮೇಳದ ಅಯೋಜಕ ಪ್ರಮೋದ್ ಸಿಂಗ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಜೆ.ಕೆ.ಶರ್ಮ, ಗಣೇಶ್, ಸಂದೀಪ್ ಸಿಂಗ್, ಸಫಾದ್ ಮೊದಲಾದವರು ಉಪಸ್ಥಿತರಿದ್ದರು.