ಅಂಗವಾಡಿಯಲ್ಲಿ ತರಬೇತಿ ಪಡೆದ ಶಿಕ್ಷಕರಿಂದ ಮಕ್ಕಳಿಗೆ ವಿದ್ಯೆ: ಉಡುಪಿ ಜಿಲ್ಲಾಧಿಕಾರಿ

ಕುಂದಾಪುರ, ಅ.13:ಸರಕಾರ ಅಂಗನವಾಡಿಗೆ ಅತ್ಯುತ್ತಮ ಪೋಷಕಾಂಶವುಳ್ಳ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುತ್ತಿದೆ. ಒಳ್ಳೆಯ ನುರಿತ ತರಬೇತಿ ಪಡೆದ ಶಿಕ್ಷಕರಿಂದ ಮಕ್ಕಳಿಗೆ ವಿದ್ಯೆ ಮತ್ತು ಸಂಸ್ಕಾರಗಳನ್ನು ಕಲಿಸುವ ಕೊಡುವ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ಪಡೆದುಕೊಳ್ಳಲು ಗ್ರಾಮದ ಮಕ್ಕಳನ್ನು ಹೆಚ್ಚು ಹೆಚ್ಚಾಗಿ ಅಂಗನವಾಡಿಗೆ ಸೇರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದ್ದಾರೆ.
ಕುಂಭಾಸಿ ಅಂಗನವಾಡಿ ಕಟ್ಟಡ ನಿರ್ಮಾಣ ಸಮಿತಿ, ಕುಂಭಾಸಿ ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಿರ್ಮಿಸಲಾದ ಕುಂಭಾಸಿ ಅಂಗನವಾಡಿ ಕೇಂದ್ರದ ನೂತನ ಸಭಾಭವನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷೀತ್ಮ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ., ತಾಪಂ ಇಒ ಶಶಿಧರ ಕೆ.ಜೆ., ಸಿಡಿಪಿಒ ಅನುರಾಧ ಹಾದಿಮನಿ, ಕುಂಭಾಸಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ, ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮಣ ಉಪಾಧ್ಯಾಯ, ಕ್ವಾಲಿಟಿ ಕಾಪೋರೇಟ್ ಮಣಿಪಾಲ ಟೆಕ್ನಾಲೋಜಿ ಮುಖ್ಯಸ್ಥ ಶ್ರೀನಿವಾಸ್ ರಾವ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ನಾರಾಯಣ ಪಾಲನ್, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಐತಾಳ್, ಅಂಗನವಾಡಿ ಕಟ್ಟಡ ನಿರ್ಮಾಣ ಸಮಿತಿ ಕೋಶಾಧಿಕಾರಿ ಶ್ರೀನಿಧಿ ಉಪಾಧ್ಯ, ಹಿರಿಯ ಪತ್ರಕರ್ತ ಯು.ಎಸ್.ಶೆಣೈ, ಉದ್ಯಮಿ ಮಂಜುನಾಥ್ ಕಾಮತ್, ಪಿಡಿಒ ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಕೀಲ ರವಿಕಿರಣ್ ಮುರಡೇಶ್ವರ, ಕುಂಭಾಸಿ ಗ್ರಾಪಂ ಮಾಜಿ ಅಧ್ಯಕ್ಷೆ ಶ್ವೇತಾ ಶ್ರೀನಿಧಿ, ಬೈಂದೂರು ಸಹಾಯಕ ಇಂಜಿನಿಯರ್ ರವಿಶಂಕರ್, ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಫಿಲೋಮಿನಾ ಗಂಗೊಳ್ಳಿ, ಮೇಲ್ವಿ ಚಾರಕಿ ಪ್ರಭಾವತಿ ಶೆಟ್ಟಿ, ರಾಧಾದಾಸ್ ಅವರನ್ನು ಸನ್ಮಾನಿಸಲಾಯಿತು. ಶೋಭಾ ವಿ ನಾಡಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಫಿಲೋಮಿನಾ ಗಂಗೊಳ್ಳಿ ವಂದಿಸಿದರು.