ಉಡುಪಿ: ವೃದ್ಧ ನಾಪತ್ತೆ
ಉಡುಪಿ: ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಬಂಡಸಾಲೆ ನಿವಾಸಿ ಗೋಪಾಲಕೃಷ್ಣ ಹೆಗ್ಡೆ (68) ಎಂಬ ಹಿರಿಯ ವ್ಯಕ್ತಿ ಸುಮಾರು ಮೂವತ್ತು ವರ್ಷಗಳ ಹಿಂದೆ ಮನೆಯಿಂದ ಹೋದವರು, ಸಂಬಂಧಿಕರ ಮನೆಗೂ ಹೋಗದೇ ವಾಪಾಸು ಮನೆಗೂ ಬಾರದೇ ನಾಪ್ತತೆಯಾಗಿದ್ದಾರೆ.
5 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಠಾಣೆ ದೂ.ಸಂಖ್ಯೆ: 08258-230213, 233100, ಮೊ.ನಂ: 9480805461 ಅನ್ನು ಸಂಪರ್ಕಿಸಬಹುದು ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story