ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ: ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮುಹಮ್ಮದ್ ಗೌಸ್, ಕಾರ್ಯದರ್ಶಿಯಾಗಿ ಮುಮ್ತಾಝ್ ಹಸನ್ ಆಯ್ಕೆ
ಮುಹಮ್ಮದ್ ಗೌಸ್ | ಅಡ್ವಕೇಟ್ ಮುಮ್ತಾಝ್ ಹಸನ್
ಕಾರ್ಕಳ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಸಮಿತಿಗೆ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಮುಹಮ್ಮದ್ ಗೌಸ್ ಮಿಯಾರು ಮತ್ತು ಕಾರ್ಯದರ್ಶಿಯಾಗಿ ಅಡ್ವಕೇಟ್ ಮುಮ್ತಾಝ್ ಹಸನ್ ಎಣ್ಣೆಹೊಳೆ ಅಜೆಕಾರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಾಕಿರ್ ಹುಸೈನ್ ಬೈಲೂರು, ಜೊತೆ ಕಾರ್ಯದರ್ಶಿಯಾಗಿ ಸಲ್ಮಾನ್ ಬೈಪಾಸ್ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ಲಾ ಆದಮ್ ಶೇಖ್ ಪುಲ್ಕೇರಿ ಆಯ್ಕೆಯಾದರು.
ತಾಲೂಕು ಸಮಿತಿಯ ಸದಸ್ಯರಾಗಿ ನಾಸಿರ್ ಶೇಖ್ ಬೈಲೂರು, ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ಅಶ್ಫಾಕ್ ಅಹ್ಮದ್ ಕಾರ್ಕಳ, ಅಬ್ದುಲ್ಲತೀಫ್ ಸಾಣೂರು, ಅಬೂಸಾಲಿ ಅಜೆಕಾರು, ಮುಹಮ್ಮದ್ ಹಸನ್ ನಿಟ್ಟೆ, ಸಯ್ಯದ್ ಅಶ್ಫಾಕ್ ಮಿಯಾರು, ಮುಹಮ್ಮದ್ ಶರೀಫ್ ರೆಂಜಾಳ, ಮುಹಮ್ಮದ್ ಇಸಾಕ್ ಪುಲ್ಕೇರಿ ಬೈಪಾಸ್, ಮುಹಮ್ಮದ್ ಮುಸ್ತಫ ಕಾರ್ಕಳ ಮತ್ತು ಮಯ್ಯದ್ದಿ ಕುಕ್ಕುಂದೂರು ಜಾರ್ಕಳ ಆಯ್ಕೆಯಾದರು.
ಶಂಶೀರ್ ಮುನಿಯಾಲು, ಅಲ್ತಾಫ್ ಹುಸೈನ್, ಸಮದ್ ಖಾನ್ ಮತ್ತು ಮುಹಮ್ಮದ್ ಯಾಕೂಬ್ ಅವರನ್ನು ತಾಲೂಕು ಸಮಿತಿಗೆ ಸಹಕರಣ ಮಾಡಿಕೊಳ್ಳಲಾಯಿತು.