ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಾಲೂಕು ಅಧ್ಯಕ್ಷರಾಗಿ ನಸೀರ್ ಅಹ್ಮದ್, ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್ ಆಯ್ಕೆ
ನಸೀರ್ ಅಹ್ಮದ್ ಶರ್ಫುದ್ದೀನ್ | ಮುಹಮ್ಮದ್ ಇಕ್ಬಾಲ್ ಮಜೂರು
ಕಾಪು: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಾಲೂಕು ಅಧ್ಯಕ್ಷರಾಗಿ ನಸೀರ್ ಅಹ್ಮದ್ ಶರ್ಫುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್ ಮಜೂರು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆಗಾಗಿ ಬುಧವಾರ ನಡೆದ ಕಾಪು ತಾಲೂಕು ಸಮಿತಿಯ ಚುನಾವಣೆಯಲ್ಲಿ 2025-26ನೇ ಸಾಲಿಗಾಗಿ ಈ ಆಯ್ಕೆಗಳು ನಡೆದುವು
ಉಪಾಧ್ಯಕ್ಷರಾಗಿ ಬುಡನ್ ಸಾಹೇಬ್ ಪಡುಬಿದ್ರೆ, ಜೊತೆ ಕಾರ್ಯದರ್ಶಿಯಾಗಿ ಆಝಮ್ ಶೇಖ್ ಉಚ್ಚಿಲ, ಕೋಶಾಧಿಕಾರಿಯಾಗಿ ಬಿ. ಮುಹಿಯುದ್ದೀನ್ ಕಟಪಾಡಿ ಆಯ್ಕೆಯಾದರು.
ತಾಲೂಕು ಸಮಿತಿ ಸದಸ್ಯರಾಗಿ ಶಬೀ ಅಹ್ಮದ್ ಖಾಝಿ ಕೊಪ್ಪಲಂಗಡಿ, ಅನ್ವರ್ ಅಲಿ ಕಾಪು ಕೊಂಬಗುಡ್ಡೆ, ಮುಹಮ್ಮದ್ ಸುಲೈಮಾನ್ ಕಾಪು, ಮುಶ್ತಾಕ್ ಅಹ್ಮದ್ ಕಾಪು, ಸನಾವರ್ ಶೇಖ್ ಕಾಪು, ರಹೀಮ್ ಕುಂಜೂರು, ರಿಯಾಝ್ ನಝೀರ್ ಮುದರಂಗಡಿ, ಝುಲ್ಫಿಕರ್ ಅಲಿ ಬೆಳಪು, ಮುಹಮ್ಮದ್ ಹನೀಫ್ ಬೆಳಪು ಮತ್ತು ಮುಹಮ್ಮದ್ ಕಟಪಾಡಿ ಆಯ್ಕೆಯಾದರು.
ಆಸಿಫ್ ಸರಕಾರಿಗುಡ್ಡೆ, ಇಬ್ರಾಹೀಂ ಉಚ್ಚಿಲ, ಅಬ್ದುಲ್ ಹಮೀದ್ ಪಡುಬಿದ್ರೆ, ಮುಹಮ್ಮದ್ ಅಲಿ ಕಾಪು ಮತ್ತು ಮುಶ್ತಾಕ್ ಇಬ್ರಾಹೀಂ ಬೆಳಪು ಅವರನ್ನು ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.