ಉಡುಪಿ ಮಹಿಳಾ ಕಾಂಗ್ರೆಸ್‌ನಿಂದ ಆಟಿದ ಕೂಟ ಕಾರ್ಯಕ್ರಮ
ಉಡುಪಿ, ಆ.13: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಹತ್ತು ಬ್ಲಾಕ್‌ಗಳ ಸಹಯೋಗದೊಂದಿಗೆ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜರಗಿದ ಆಟಿದ ಕೂಟ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಚಂದ್ರಕಲಾ ಡಿ.ರಾವ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿ, ನಾಲ್ಕು ಇಂಚಿನ ನಾಲಿಗೆಯ ರುಚಿಗಾಗಿ ನಿರಂತರ ರುಚಿಕರ ಖಾದ್ಯವನ್ನೇ ಸೇವಿಸುವರಿಗೆ ಉತ್ತಮ ಆರೋಗ್ಯ ದೂರದ ಮಾತು. ಹಿಂದಿನ ಕಾಲದಲ್ಲಿ ಸಾಂಪ್ರದಾ ಯಿಕ ಆಹಾರ ಪದ್ಧತಿಗೆ ಒತ್ತು ನೀಡಲಾಗುತ್ತಿತ್ತು. ಇಂದು ಸಾಂಪ್ರದಾಯಿಕ ಆಹಾರ ಪದ್ಧತಿ ಎಂಬುದು ವರ್ಷಕ್ಕೊಮ್ಮೆ ಸೇವಿಸುವ ಒಂದು ಪ್ಯಾಶನ್ ಕ್ರಮವಾಗಿದೆ. ಈ ಆಲೋಚನೆ ಬದಲಾಗಬೇಕೆಂದು ತಿಳಿಸಿದರು.
ಆಟಿ ಕೂಟವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ವೆರೋನಿಕಾ ಕರ್ನೆಲಿಯೋ, ರಮೇಶ್ ಕಾಂಚನ್, ಹರೀಶ್ ಕಿಣಿ, ಅಣ್ಣಯ್ಯ ಶೇರಿಗಾರ್, ಫಾ.ವಿಲಿಯಂ ಮಾರ್ಟಿಸ್, ಭಾಸ್ಕರ್ ರಾವ್ ಕಿದಿಯೂರು, ಸರಳಾ ಕಾಂಚನ್, ಜ್ಯೋತಿ ಹೆಬ್ಬಾರ್, ಲಕ್ಷ್ಮೀ ಭಟ್, ಮಮತಾ ಶೆಟ್ಟಿ, ಗೋಪಿ ಕೆ.ನಾಯ್ಕ್, ದೇವಕಿ ಸಣ್ಣಯ್ಯ, ಮಂಜುಳಾ ದೇವಾಡಿಗ, ಸಂದೇಶ್ ಶೆಟ್ಟಿ, ರೇಖಾ ಸುವರ್ಣ, ಅನಿತಾ ಡಿಸೋಜ ಉಪಸ್ಥಿತರಿದ್ದರು.
ಉಡುಪಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೀತಾ ವಾಗ್ಲೆ ಸ್ವಾಗತಿಸಿದರು. ಶಾಂತಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.