ದಕ್ಷಿಣ ವಲಯ ಅಟ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ
ಉಡುಪಿ, ಅ.೧೯: ತೆಲಂಗಾಣದ ವಾರಂಗಲ್ ಇತ್ತೀಚೆಗೆ ನಡೆದ ದಕ್ಷಿಣ ವಲಯ ಜೂನಿಯರ್ ಅಟ್ಲೆಟಿಕ್ ಚಾಂಪಿಯನ್ಶಿಪ್ನ ಗುಂಡು ಎಸೆತ ಸ್ಪರ್ಧೆಯಲ್ಲಿ ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸ್ನ ಅನುರಾಗ್ ಜಿ. ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ
ಇವರು ಕಾರ್ಕಳ ಬಿಎಸ್ಎನ್ಎಲ್ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿ ಪುತ್ರ. ಇವರು ಅಂತಾರಾಷ್ಟ್ರೀಯ ಕ್ರೀಡಾಪಟು ಶಾಲಿನಿ ರಾಜೇಶ್ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story