ಒಳ್ಳೆಯ ಓದು ಉತ್ತಮ ಬರವಣಿಗೆಗೆ ಪ್ರೇರಣೆ: ಪ್ರೊ.ಮುರಳೀಧರ ಉಪಾಧ್ಯ
ಉಡುಪಿ, ಅ.11: ಒಳ್ಳೆಯ ಓದು ಒಳ್ಳೆಯ ಬರವಣಿಗೆಗೆ ಪ್ರೇರಣೆಯನ್ನು ನಿಡುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವ ಣಿಗೆಯ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯವನ್ನು ಓದುವುದು ಮತ್ತು ಬರೆಯುವುದರಿಂದ ಜೀವನದಲ್ಲಿ ಒಂದು ವಿಶೇಷ ಆನಂದವನ್ನು ಪಡೆಯಲು ಸಾಧ್ಯ ಎಂದು ನವದೆಹಲಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಹೇಳಿದ್ದಾರೆ.
ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಾಹಿತ್ಯ ಸಂಘದ 2023-24ನೆ ಸಾಲಿನ ಕಾರ್ಯ ಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಎಸ್.ಶೆಟ್ಟಿ ಸಾಹಿತ್ಯಲೋಕವನ್ನು ಅರ್ಥ ಮಾಡಿಕೊಳ್ಳಲು ವಿಶಾಲ ಮನಸ್ಸು ಮತ್ತು ಹೃದಯವಂತಿಕೆಬೇಕು. ಸಾಹಿತ್ಯ ಸಂಘದ ಚಟುವಟಿಕೆಗಳು ವಿದ್ಯಾರ್ಥಿ ಗಳ ಸೃಜನಶೀಲತೆಯನ್ನು ಹೆಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಂಘದ 2023-24ನೇ ಸಾಲಿನ ಸಂಚಾಲಕಿ ಯಾಗಿ ಅಮೃತ ಎ.ಎಂ., ಉಪ ಸಂಚಾಲಕ ರಾಗಿ ಚೈತ್ರಕೆ ಸಿ. ಮತ್ತು ಮಂಗಳ ಗೌರಿ, ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ ದಿವ್ಯ, ಅಪೂರ್ವ ಮತ್ತು ಕೃತಿ ಆಯ್ಕೆಯಾಗಿ ಪ್ರಾಂಶುಪಾಲರಿಂದ ಗೌರವವನ್ನು ಸ್ವೀಕರಿಸಿದರು.
ಕಾಲೇಜಿನ ಸಾಹಿತ್ಯ ಸಂಘದ ಸಂಚಾಲಕ ಪ್ರೊ.ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ರವಿರಾಜ್ ಶೆಟ್ಟಿ ಸಹ ಪ್ರಾಧ್ಯಾಪಕ ಡಾ.ಪಿ.ಬಿ.ಪ್ರಸನ್ನ ಮತ್ತು ಐ.ಕ್ಯೂ.ಎ.ಸಿ. ಸಂಚಾಲಕ ಸೋಜನ್ ಕೆ.ಜಿ. ಉಪಸ್ಥಿರಿದ್ದರು. ಚೈತ್ರ ಸ್ವಾಗತಿಸಿದರು. ಸಾಕ್ಷಿ ವಂದಿಸಿದರು. ಅಮೃತ ಕಾರ್ಯಕ್ರಮ ನಿರೂಪಿಸಿದರು.