ಗೃಹಲಕ್ಷ್ಮೀ ಯೋಜನೆ: ಉಡುಪಿಯಲ್ಲಿ 5745 ಮಂದಿ ನೊಂದಣಿ
ಉಡುಪಿ, ಜು.22: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಒಟ್ಟು 5745 ಮಂದಿ ಮಹಿಳೆಯರು ನೊಂದಾಯಿಸಿಲ್ಪಟ್ಟಿದ್ದಾರೆ. ಮೊದಲ ದಿನದಂದು 2526 ಮಂದಿ ಯೋಜನೆಗೆ ನೊಂದಾವಣಿಗೊಂಡಿದ್ದರೆ, ಎರಡನೇ ದಿನದಂದು 3219 ಮಂದಿ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಎರಡು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು ಮೂರು ಲಕ್ಷ ಮಂದಿ ಮಹಿಳೆಯರು ಸರ್ವರ್ ಸ್ಲೋ ಸೇರಿದಂತೆ ವಿವಿಧ ಸಮಸ್ಯೆಗಳ ನಡುವೆ ಯೋಜನೆಗೆ ತಮ್ಮ ಹೆಸನ್ನು ನೋಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನ 60,273 ಮಂದಿ ಹಾಗೂ ಎರಡನೇ ದಿನದಂದು 2,36,406 ಮಂದಿಯ ಹೊಸರು ನೊಂದಾವಣಿಗೊಂಡಿದೆ.
ಮೊದಲ ದಿನ 3116 ಮಂದಿ ನೊಂದಣಿಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಎರಡನೇ ದಿನದಂದು 4057 ಮಂದಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ 4822 (1875+ 2947) ಹಾಗೂ ಕೊಡಗು ಜಿಲ್ಲೆಯಲ್ಲಿ 1325(668+657) ಹೆಸರು ಯೋಜನೆಗೆ ನೊಂದಣಿಗೊಂಡಿದೆ.
Next Story